ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನನ್ನ ತಾಯಿ ಕೊನೆಯ ದಿನಗಳನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದಳು: ಪ್ರಧಾನಿ ಮೋದಿ

Published 20 ಮೇ 2024, 15:51 IST
Last Updated 20 ಮೇ 2024, 15:51 IST
ಅಕ್ಷರ ಗಾತ್ರ

ನವದೆಹಲಿ: ‘ಒಬ್ಬ ವ್ಯಕ್ತಿ, 13 ವರ್ಷಗಳ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿ ಮತ್ತು 10 ವರ್ಷಗಳ ಕಾಲ ಪ್ರಧಾನಿಯಾಗಿ ಕೆಲಸ ಮಾಡಿದ. ಆದರೆ 100 ವರ್ಷ ತುಂಬಿದ ಆತನ ತಾಯಿ ತನ್ನ ಕೊನೆಯ ದಿನಗಳನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಕಳೆಯುತ್ತಾಳೆ. ನನ್ನ ಜೀವನವು ಸ್ವಲ್ಪ ವಿಭಿನ್ನವಾಗಿದೆ’ ಎಂದು ಪ್ರಧಾನಿ ಮೋದಿ ಅವರು ಹೇಳಿದ್ದಾರೆ.

ಲೋಕಸಭಾ ಚುನಾವಣೆ ಹಿನ್ನೆಲೆ ಸಾರ್ವಜನಿಕ ಜೀವನ, ನಾಯಕತ್ವ, ಬ್ರ್ಯಾಂಡ್ ಮೋದಿ ಮುಂತಾದ ವಿಷಯಗಳ ಕುರಿತು ಪಿಟಿಐ ಸುದ್ದಿಸಂಸ್ಥೆ ಜೊತೆ ಸಂದರ್ಶನದಲ್ಲಿ ಮೋದಿ ಹಂಚಿಕೊಂಡಿದ್ದಾರೆ.

ಚುನಾವಣೆಗಳಲ್ಲಿ ಪಕ್ಷವು ತಮ್ಮ ಹೆಸರನ್ನು ಬ್ರ್ಯಾಂಡ್ ಆಗಿ ಬಳಸಿಕೊಂಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಬ್ರ್ಯಾಂಡ್ ಎಂದರೇನು ಮತ್ತು ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ನನಗೆ ತಿಳಿದಿಲ್ಲ. ಜನರು ಮೋದಿಯವರ ಜೀವನ ಮತ್ತು ಅವರ ಕೆಲಸವನ್ನು ನೋಡುತ್ತಾರೆ ಅಷ್ಟೇ’ ಎಂದಿದ್ದಾರೆ.

ಈ ಚುನಾವಣೆ ಸೇರಿ 2029 ಚುನಾವಣೆಯಲ್ಲೂ ಪ್ರಧಾನಿಯಾಗಿ ಮುಂದುವರಿಯುವುದನ್ನು ಎದುರು ನೋಡುತ್ತಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘2047ರ ವೇಳೆಗೆ ನನ್ನ ದೇಶವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಪರಿವರ್ತಿಸುವುದು ನನ್ನ ಧ್ಯೇಯವಾಗಿದೆ. ಅದಕ್ಕಾಗಿ ನಾನು ಏನನ್ನಾದರೂ ಮಾಡಬೇಕಿದೆ. ಗುರಿ ಮುಟ್ಟುವುದಕ್ಕೆ ಏನು ಬೇಕು ಅದನ್ನು ನಾನು ಮಾಡುತ್ತಿದ್ದೇನೆ. ನಾನೊಬ್ಬ ಸೇವಕನಾಗಿದ್ದು, ಮುಂದಿನ ಪ್ರಧಾನಿ ಯಾರಾಗಬೇಕೆಂದು ಜನ ನಿರ್ಧರಿಸುತ್ತಾರೆ’ ಎಂದು ಹೇಳಿದರು.

‘ಬ್ರ್ಯಾಂಡ್ ಮೋದಿ' ಕುರಿತು ಮಾತನಾಡಿದ ಅವರು, ‘ಎರಡು ದಶಕಗಳ ಸಾರ್ವಜನಿಕ ಜೀವನದಲ್ಲಿ ಗಳಿಸಿದ ಜನರ ನಂಬಿಕೆಯ ಫಲಿತಾಂಶ ಇದಾಗಿದ್ದು, ಜನರ ಜೀವನವನ್ನು ಸುಧಾರಿಸಲು ನಾನು ಮಾಡಿದ ನಿಜವಾದ ಪ್ರಯತ್ನ ಮತ್ತು ದಣಿವರಿಯದ ಶ್ರಮವನ್ನು ಜನರು ನೋಡಿದ್ದಾರೆ’ ಎಂದರು.

ಚುನಾವಣಾ ಪ್ರಚಾರದ ಬಗ್ಗೆ ಮಾತನಾಡಿದ ಅವರು, ‘ಉರಿಯುತ್ತಿರುವ ಬಿಸಿಲಿನಲ್ಲಿಯೂ ಜನರು ನನ್ನ ರೋಡ್ ಶೋ, ರ್‍ಯಾಲಿಗಳಲ್ಲಿ ಭಾಗವಹಿಸುತ್ತಿದ್ದಾರೆ. ಮಕ್ಕಳು, ಹಿರಿಯರು ಸೇರಿ ಎಲ್ಲ ವರ್ಗದ ವಯಸ್ಸಿನವರು ನನ್ನನ್ನು ನೋಡಲು, ನನ್ನ ಮಾತನ್ನು ಕೇಳಲು ಬರುತ್ತಾರೆ’ ಎಂದು ಹೇಳಿದರು.

ಇದೇ ವೇಳೆ ತಮ್ಮ ತಾಯಿಯ ಅಭೂತಪೂರ್ವ ಸೇವೆ ಮತ್ತು ಕೊನೆಯ ಕ್ಷಣಗಳನ್ನು ಸ್ಮರಿಸಿಕೊಂಡರು. ತನ್ನ ಮಗ ಮುಖ್ಯಮಂತ್ರಿ, ಪ್ರಧಾನ ಮಂತ್ರಿಯಾದರು ನನ್ನ ತಾಯಿ ಕೊನೆಯ ದಿನಗಳನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದಿದ್ದಾರೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT