ಭೋಪಾಲ್: ನೌಕಾಪಡೆಯ ಕಿರಣ್ ಅಂಕುಷ್ ಜಾಧವ್ ಅವರು ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್ಷಿಪ್ನ ಪುರುಷರ 10 ಮೀ. ಏರ್ ರೈಫಲ್ ಸ್ಪರ್ಧೆಯಲ್ಲಿ ಸೋಮವಾರ ಸ್ವರ್ಣಕ್ಕೆ ಗುರಿಯಿಟ್ಟರು. ಈ ಹಾದಿಯಲ್ಲಿ ಅವರು ಒಲಿಂಪಿಯನ್ ಅರ್ಜುನ್ ಬಬೂತಾ ಅವರ ಸವಾಲನ್ನು ಮೀರಿ ನಿಂತರು.

ಕಿರಣ್ ಅವರು ಒಟ್ಟು 252.1 ಅಂಕಗಳೊಂದಿಗೆ ಫೋಡಿಯಂನ ಅಗ್ರಸ್ಥಾನ ತಮ್ಮದಾಗಿಸಿಕೊಂಡರು. ಬಬೂತಾ (251.4 ಪಾಯಿಂಟ್ಸ್) ಹಾಗೂ ಐಶ್ವರಿ ಪ್ರತಾಪ್ಸಿಂಗ್ ತೋಮರ್ (229.8) ಅವರು ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಜಯಿಸಿದರು.

ಜೂನಿಯರ್ ಪುರುಷರ 10 ಮೀ. ಏರ್ ರೈಫಲ್ ಸ್ಪರ್ಧೆಯಲ್ಲಿ ಗುಜರಾತ್ನ ಮೊಹಮ್ಮದ್ ಮುರ್ತಾಝಾ ವಾನಿಯಾ ಅವರು (254.3 ಪಾಯಿಂಟ್ಸ್) ಅಧಿಕಾರಯುತವಾಗಿ ಚಿನ್ನದ ಪದಕ ಗೆದ್ದರು. ಪಶ್ಚಿಮ ಬಂಗಾಳದ ಅಭಿನವ್ ಶಾ (251.6) ರಜತ ಗೆದ್ದರೆ, ಕನ್ನಡಿಗ ಓಂಕಾರ್ ವಿಕಾಸ್ ವಾಘಮರೆ (230.1) ಕಂಚು ಜಯಿಸಿದರು. ಕರ್ನಾಟಕದ ಮತ್ತೊಬ್ಬ ಶೂಟರ್ ನರೇನ್ ಪ್ರಣವ್ (209) ನಾಲ್ಕನೇ ಸ್ಥಾನ ಪಡೆದುಕೊಂಡರು.