ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜಸ್ಥಾನ: ಅಧಿಕ ತಾಪಮಾನದಿಂದ ಸಾವು

Published 28 ಮೇ 2024, 15:23 IST
Last Updated 28 ಮೇ 2024, 15:23 IST
ಅಕ್ಷರ ಗಾತ್ರ

ಜೈಪುರ: ರಾಜಸ್ಥಾನದಲ್ಲಿ ಅಧಿಕ ತಾಪಮಾನ ಪರಿಸ್ಥಿತಿಯು ಮುಂದುವರಿದಿದ್ದು, 22 ವರ್ಷ ವಯಸ್ಸಿನ ಯುವಕ ಸೇರಿ ಇನ್ನೂ ಕೆಲವರು ಉಷ್ಣಾಂಶದ ಕಾರಣಕ್ಕೆ ಮೃತಪಟ್ಟಿದ್ದಾರೆ.

ಪರೀಕ್ಷೆ ಬರೆಯುವ ಸಲುವಾಗಿ ಯುವಕನು ಜೈಪುರದ ಕಾಲೇಜೊಂದಕ್ಕೆ ಬಂದಿದ್ದನು. ಪರೀಕ್ಷಾ ಕೋಣೆಯಿಂದ ಹೊರಬರುತ್ತಿದ್ದಂತೆ ಪ್ರಜ್ಞೆ ತಪ್ಪಿ ಬಿದ್ದನು. ಆಸ್ಪತ್ರೆಯಲ್ಲಿ ವೈದ್ಯರು ಆತ ಮೃತಪಟ್ಟಿರುವುದನ್ನು ದೃಢಪಡಿಸಿದರು. ಅಧಿಕ ತಾಪಮಾನವೇ ಯುವಕನ ಸಾವಿಗೆ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಇದಲ್ಲದೆ ಅಧಿಕ ತಾಪಮಾನದಿಂದಾಗಿ ಜೈಸಲ್ಮೇರ್‌ನಲ್ಲಿ ನಿಯೋಜನೆಗೊಂಡಿದ್ದ ಗಡಿ ಭದ್ರತಾ ಪಡೆಯ ಕಾನ್‌ಸ್ಟೆಬಲ್‌ ಅಜಯ್‌ ಕುಮಾರ್‌ (28), ಜೋಧ್‌ಪುರದಲ್ಲಿ ನಿಯೋಜನೆಗೊಂಡಿದ್ದ ಕಾನ್‌ಸ್ಟೆಬಲ್‌ ಪದಮ್‌ ಸಿಂಗ್‌ ಮತ್ತು ಜೈನ ಸಂತರೊಬ್ಬರು ಮೃತಪಟ್ಟಿದ್ದಾರೆ.

ರಾತ್ರಿ ವೇಳೆಯೂ 33 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರುತ್ತಿದ್ದು, ರಸ್ತೆಗಳು ಬಿಕೋ ಎನ್ನುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT