ಬೆತುಲ್ (ಮಧ್ಯಪ್ರದೇಶ): ಇಲ್ಲಿಯ 12 ವರ್ಷದ ಬಾಲಕಿಯ ಮೇಲೆ ಹಿಟ್ಟಿನ ಗಿರಣಿಯ ಮಾಲೀಕನೋರ್ವ ಅತ್ಯಾಚಾರವೆಸಗಿದ್ದು, ಸಿಟ್ಟಿಗೆದ್ದ ಸಂಬಂಧಿಕರು ಆರೋಪಿಯ ಕಾರು, ಬೈಕ್ಗೆ ಬೆಂಕಿ ಹಚ್ಚಿದ್ದಾರೆ ಎಂದು ಮಂಗಳವಾರ ಪೊಲೀಸರು ತಿಳಿಸಿದ್ದಾರೆ. ಇಲ್ಲಿಯ ಆಜಾದ್ ವಾರ್ಡ್ ಪ್ರದೇಶದಲ್ಲಿ ಸೋಮವಾರ ಸಂಜೆ ವೇಳೆ ಈ ಘಟನೆ ನಡೆದಿದ್ದು, ಬಾಲಕಿ ಮನೆಯಲ್ಲಿ ಈ ಬಗ್ಗೆ ಹೇಳಿಕೊಂಡಿದ್ದರಿಂದ ಕೃತ್ಯ ಬೆಳಕಿಗೆ ಬಂದಿದೆ. ಸ್ಥಳೀಯ ಸಂಸ್ಥೆ ಸದಸ್ಯನಾಗಿದ್ದ 58 ವರ್ಷದ ಆರೋಪಿಯನ್ನು ಇನ್ನೂ ಬಂಧಿಸಲಾಗಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.