ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೇತಕ್ ಹೆಲಿಕಾಪ್ಟರ್ ಅಪಘಾತ: ನೌಕಾಪಡೆ ನಾವಿಕ ಸಾವು

Published 4 ನವೆಂಬರ್ 2023, 14:51 IST
Last Updated 4 ನವೆಂಬರ್ 2023, 14:51 IST
ಅಕ್ಷರ ಗಾತ್ರ

ಕೊಚ್ಚಿ: ಇಲ್ಲಿರುವ ನೌಕಾಪಡೆಯ ವಾಯು ನೆಲೆಯಲ್ಲಿ ಶನಿವಾರ ನಡೆದ ಚೇತಕ್ ಹೆಲಿಕಾಪ್ಟರ್‌ನ ಅಪಘಾತದಿಂದಾಗಿ ಕರ್ತವ್ಯದಲ್ಲಿದ್ದ ನೌಕಾಪಡೆಯ ನಾವಿಕರೊಬ್ಬರು ಮೃತಪಟ್ಟಿದ್ದಾರೆ ಎಂದು ಭಾರತೀಯ ನೌಕಾಪಡೆ ತಿಳಿಸಿದೆ.

ಈ ಘಟನೆಯ ಬಗ್ಗೆ ನೌಕಾಪಡೆಯು ತನಿಖೆಗೆ ಆದೇಶಿಸಿದೆ. ದಕ್ಷಿಣ ನೌಕಾ ಕಮಾಂಡ್‌ನ ಐಎನ್‌ಎಸ್ ಗರುಡಾದಲ್ಲಿ ದೈನಂದಿನ ತಪಾಸಣೆ ವೇಳೆ ಈ ಘಟನೆ ಸಂಭವಿಸಿದೆ. ಮೃತಪಟ್ಟ ನಾವಿಕ ಮಧ್ಯಪ್ರದೇಶದ ಯೋಗೇಂದ್ರ ಸಿಂಗ್‌. ಇವರು ಲೀಡಿಂಗ್ ಏರ್ ಮೆಕ್ಯಾನಿಕ್ (ಎಲ್‌ಎಎಂ) ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ನೌಕಾಪಡೆ ಅಧಿಕಾರಿಗಳು ತಿಳಿಸಿದ್ದಾರೆ. 

ನಾವಿಕ ಮೃತಪಟ್ಟಿರುವುದಕ್ಕೆ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್‌ ಆರ್‌. ಹರಿಕುಮಾರ್‌ ತೀವ್ರ ಸಂತಾಪ ವ್ಯಕ್ತಪಡಿಸಿರುವುದಾಗಿ ನೌಕಾಪಡೆಯ ವಕ್ತಾರರು ‘ಎಕ್ಸ್‌’ನಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT