ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಕ್ರಮವಾಗಿ ಜನರನ್ನು ದ.ಕೊರಿಯಾಕ್ಕೆ ಕಳುಹಿಸುತ್ತಿದ್ದ ನೌಕಾಪಡೆ ಅಧಿಕಾರಿಯ ಬಂಧನ

Published 29 ಜೂನ್ 2024, 2:53 IST
Last Updated 29 ಜೂನ್ 2024, 2:53 IST
ಅಕ್ಷರ ಗಾತ್ರ

ಮುಂಬೈ: ನಕಲಿ ದಾಖಲೆ ಸೃಷ್ಟಿಸಿ ಅಕ್ರಮವಾಗಿ ಜನರನ್ನು ದಕ್ಷಿಣ ಕೊರಿಯಾಕ್ಕೆ ಕಳುಹಿಸುತ್ತಿದ್ದ ಆರೋಪದ ಮೇಲೆ ನೌಕಪಡೆಯ ಅಧಿಕಾರಿ ಲೆಫ್ಟಿನೆಂಟ್ ಸಿಡಿಆರ್ ವಿಪಿನ್ ಕುಮಾರ್ ಡಾಗರ್ ಅವರನ್ನು ಬಂಧಿಸಲಾಗಿದೆ ಎಂದು ಮುಂಬೈ ಪೊಲೀಸ್ ಅಧಿಕಾರಿಗಳು ತಿಳಿಸಿದರು.

ಡಾಗರ್, ನಕಲಿ ದಾಖಲೆಗಳನ್ನು ಸೃಷ್ಟಿಸಿ ಜನರನ್ನು ಅಕ್ರಮವಾಗಿ ವಿದೇಶಕ್ಕೆ ಕಳುಹಿಸುವ ಗ್ಯಾಂಗ್‌ನ ಸದಸ್ಯನೂ ಆಗಿರಬಹುದು ಎಂದು ಶಂಕಿಸಲಾಗಿದೆ. ಗುರುವಾರ ಡಾಗರ್‌ನನ್ನು ಕೊಲಾಬಾದಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.

ಪ್ರತಿ ದಾಖಲೆಗೆ ₹10 ಲಕ್ಷದವರೆಗೆ ವಸೂಲಿ ಮಾಡಿ 8ರಿಂದ 10 ಜನರನ್ನು ದಕ್ಷಿಣ ಕೊರಿಯಾಕ್ಕೆ ಕಳುಹಿಸಿದ್ದಾಗಿ ಆತನ ಸಹಚರರು ತಪ್ಪೊಪ್ಪಿಕೊಂಡಿದ್ದಾರೆ. ಹರಿಯಾಣದ ಮೂಲದವರಾದ ಡಾಗರ್, ವಾಯುಪಡೆಯ ಅಧಿಕಾರಿಯ ಮಗ ಎಂದು ತಿಳಿಸಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಡಾಗರ್‌ನನ್ನು ಜುಲೈ 5ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT