ಪೂರ್ನಿಯಾ, ಬಿಹಾರ (ಪಿಟಿಐ): ಬಿಹಾರದ ಪೂರ್ನಿಯಾ ಜಿಲ್ಲೆಯಲ್ಲಿ ಶನಿವಾರ ಮುಂಜಾನೆ ಕಾರೊಂದು ರಸ್ತೆ ಬದಿಯ ಹೊಂಡಕ್ಕೆ ಬಿದ್ದುದರಿಂದ ಒಂಬತ್ತು ಮಂದಿ ಸಾವಿಗೀಡಾಗಿದ್ದಾರೆ ಹಾಗೂ ಇಬ್ಬರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ನತದೃಷ್ಟರು ಪೂರ್ನಿಯಾದ ತಾರಾಬಾದ್ನಲ್ಲಿ ತಿಲಕ ಕಾರ್ಯಕ್ರಮವನ್ನು (ಮದುವೆಗೂ ಮುನ್ನದ ಕಾರ್ಯಕ್ರಮ) ಮುಗಿಸಿಕೊಂಡು ಎಸ್ಯುವಿ ಕಿಶನ್ಗಂಜ್ ಜಿಲ್ಲೆಯ ನಾನಿಯಾ ಗ್ರಾಮಕ್ಕೆ ತೆರಳುತ್ತಿದ್ದರು’ ಎಂದು ಬೈಸಿಯ ಉಪವಿಭಾಗಾಧಿಕಾರಿ ಕುಮಾರಿ ತೌಶಿ ಹೇಳಿದರು.