ಸರ್ಕಾರದ ಹಿರಿಯ ಅಧಿಕಾರಿಗಳ ಪ್ರಕಾರ, ನಿತೀಶ್ ಕುಮಾರ್ ಅವರ ಪತ್ನಿ ಮಂಜು ಸಿನ್ಹಾ ಅವರು ಶಾಲಾ ಶಿಕ್ಷಕಿಯಾಗಿದ್ದರು. ಅನಾರೋಗ್ಯದಿಂದ ದಶಕದ ಹಿಂದೆ ಮೃತಪಟ್ಟಿದ್ದರು. ಮಂಜು ಅವರ ಹೆಸರಲ್ಲಿದ್ದ ಪಿಎಫ್, ಗ್ರಾಚ್ಯುಟಿ, ನಿವೃತ್ತಿಯ ನಂತರದ ಸೌಲಭ್ಯಗಳು ಮಗ ನಿಶಾಂತ್ಗೆ ವರ್ಗಾವಣೆಯಾಗಿದೆ.ಇದಲ್ಲದೇ, ಪಟ್ನಾ, ನಳಂದಾ, ಭಕ್ತಿಯಾರ್ಪುರದಲ್ಲಿ ನಿಶಾಂತ್ ಫ್ಲಾಟ್ ಹೊಂದಿದ್ದು, ಇದರ ಮೌಲ್ಯ ₹1ಕೋಟಿಯಷ್ಟಿದೆ.