ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಭಾರತದ ಮೂಲಕ ಲಂಡನ್‌ನತ್ತ ಹಸೀನಾ: ದೆಹಲಿ ಸಮೀಪ ಬಾಂಗ್ಲಾ ಪ್ರಧಾನಿ ವಿಮಾನ ಲ್ಯಾಂಡ್

Published 5 ಆಗಸ್ಟ್ 2024, 14:56 IST
Last Updated 5 ಆಗಸ್ಟ್ 2024, 14:56 IST
ಅಕ್ಷರ ಗಾತ್ರ

ನವದೆಹಲಿ: ಬಾಂಗ್ಲಾದೇಶದ ಪ್ರಧಾನ ಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿ ದೇಶ ತೊರೆದಿರುವ ಶೇಖ್ ಹಸೀನಾ, ಭಾರತದ ಮೂಲಕ ಲಂಡನ್‌ಗೆ ತೆರಳಲು ಮುಂದಾಗಿದ್ದಾರೆ. ಮಾರ್ಗಮಧ್ಯೆ, ಅವರ ವಿಮಾನ ಗಾಜಿಯಾಬಾದ್ ಸಮೀಪದ ಹಿಂಡನ್ ವಾಯುನೆಲೆಯಲ್ಲಿ ಲ್ಯಾಂಡ್ ಆಗಿದೆ ಎಂದು ರಾಜತಾಂತ್ರಿಕ ಮೂಲಗಳು ತಿಳಿಸಿವೆ.

ಬಾಂಗ್ಲಾದೇಶದ ವಾಯುಪಡೆಯ ಮಿಲಿಟರಿ ಸಾರಿಗೆ ವಿಮಾನ C-130Jನಲ್ಲಿ ಶೇಖ್ ಹಸೀನಾ ಭಾರತಕ್ಕೆ ಬಂದಿಳಿದಿದ್ದಾರೆ ಎಂದು ಅದು ತಿಳಿಸಿದೆ.

ಮಿಲಿಟರಿ ಸಾರಿಗೆ ವಿಮಾನದಲ್ಲೇ ಅವರು ಲಂಡನ್‌ಗೆ ತೆರಳುವರೇ ಅಥವಾ ಭಾರತದಿಂದ ಬೇರೊಂದು ವಿಮಾನದಲ್ಲಿ ತೆರಳುವರೇ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ ಎಂದು ಮೂಲಗಳು ಹೇಳಿವೆ.

ದೆಹಲಿಯಲ್ಲಿ ನೆಲೆಸಿರುವ ಅವರ ಮಗಳು ಸೈಮಾ ವಾಜೆದ್ ಅವರನ್ನು ಹಸೀನಾ ಭೇಟಿ ಮಾಡಬಹುದು. ಸೈಮಾ ಅವರು ವಿಶ್ವ ಆರೋಗ್ಯ ಸಂಸ್ಥೆಯ ಮಧ್ಯಪ್ರಾಚ್ಯದ ಪ್ರಾದೇಶಿಕ ನಿರ್ದೇಶಕಿಯಾಗಿ ಕೆಲಸ ಮಾಡುತ್ತಿದ್ದಾರೆ.

ಹಸೀನಾ ವಿಮಾನ ಹಿಂಡನ್‌ನಲ್ಲಿ ಇಳಿದಿರುವ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ.

ಬಾಂಗ್ಲಾದೇಶದ ಸರ್ಕಾರದ ಮನವಿ ಮೇರೆಗೆ ಹಸೀನಾ ಅವರು ಲಂಡನ್‌ಗೆ ತೆರಳಲು ಭಾರತವು ನೆರವು ನೀಡಿದೆ ಎಂದು ಮೂಲಗಳು ತಿಳಿಸಿವೆ ಎಂದು ಪಿಟಿಐ ಹೇಳಿದೆ.

ಬಾಂಗ್ಲಾದೇಶದ ಬೆಳವಣಿಗೆಗಳ ಕುರಿತಂತೆ ಭಾರತವು ನಿಕಟವಾಗಿ ಗಮನಿಸುತ್ತಿದೆ ಎಂದು ವರದಿ ತಿಳಿಸಿದೆ.ಬಾಂಗ್ಲಾದೇಶದ ಬೆಳವಣಿಗೆಗಳ ಕುರಿತಂತೆ ಭಾರತವು ಇನ್ನಷ್ಟೇ ಪ್ರತಿಕ್ರಿಯೆ ನೀಡಬೇಕಿದೆ.

ಪ್ರಧಾನಿ ಹುದ್ದೆಗೆ ಶೇಖ್ ಹಸೀನಾ ರಾಜೀನಾಮೆ ನೀಡಿದ್ದು, ಮಧ್ಯಂತರ ಸರ್ಕಾರ ರಚಿಸುವುದಾಗಿ ಬಾಂಗ್ಲಾದೇಶದ ಸೇನಾ ಮುಖ್ಯಸ್ಥ ವಕಾರ್ ಜಮಾನ್ ತಿಳಿಸಿದ್ದಾರೆ.

‘ನಾನು ದೇಶದ ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳುತ್ತಿದ್ದೇನೆ. ದಯವಿಟ್ಟು ಸಹಕಾರ ನೀಡಿ’ಎಂದು ಅವರು ಟೆಲಿವಿಜನ್ ಸಂದರ್ಶನದಲ್ಲಿ ಹೇಳಿದ್ದಾರೆ.

ಹಸೀನಾ ರಾಜೀನಾಮೆಗೆ ಒತ್ತಾಯಿಸಿ ನಿನ್ನೆಯಿಂದ ಆರಂಭವಾಗಿದ್ದ ಅಸಹಕಾರ ಚಳವಳಿ ಹಿಂಸಾರೂಪಕ್ಕೆ ತಿರುಗಿತ್ತು. ಪ್ರತಿಭಟನಾಕಾರರು ಮತ್ತು ಅವಾಮಿ ಲೀಗ್ ಕಾರ್ಯಕರ್ತರ ನಡುವಿನ ಘರ್ಷಣೆಯಲ್ಲಿ 106ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರರ ಮಕ್ಕಳಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡುವ ವಿವಾದಿತ ಯೋಜನೆಯ ವಿರುದ್ಧ ಕಳೆದ ತಿಂಗಳಿನಿಂದ ವಿದ್ಯಾರ್ಥಿಗಳು ಪ್ರತಿಭಟನೆ ಆರಂಭಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT