ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಫಾಲ್‌: ಬಾಂಬ್‌ ಸ್ಫೋಟ– ಒಬ್ಬ ಸಾವು

Published 24 ಫೆಬ್ರುವರಿ 2024, 14:28 IST
Last Updated 24 ಫೆಬ್ರುವರಿ 2024, 14:28 IST
ಅಕ್ಷರ ಗಾತ್ರ

ಇಂಫಾಲ್‌: ‘ಮಣಿಪುರದ ಇಂಫಾಲ್‌ ಪಶ್ಚಿಮ ಜಿಲ್ಲೆಯಲ್ಲಿ ಕಚ್ಚಾ ಬಾಂಬ್‌ ಸ್ಫೋಟಗೊಂಡು ಒಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ. ಮತ್ತೊಬ್ಬ ವ್ಯಕ್ತಿ ಗಾಯಗೊಂಡಿದ್ದಾನೆ’ ಎಂದು ಪೊಲೀಸರು ಶನಿವಾರ ತಿಳಿಸಿದರು.

‘ಡಿ.ಎಂ ಕಾಲೇಜಿನ ಸಂಕೀರ್ಣದಲ್ಲಿ ಶುಕ್ರವಾರ ರಾತ್ರಿ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಒಯಿನಮ್‌ ಕೆನೆಗಿ ಎಂಬಾತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ಸಾವೀಗೀಡಾಗಿದ್ದಾನೆ. ಗಾಯಗೊಂಡ ಮತ್ತೊಬ್ಬ ವ್ಯಕ್ತಿಗೆ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಅವರು ಹೇಳಿದರು.

‘ಇಲ್ಲಿಯವರೆಗೆ ಯಾವುದೇ ಸಂಘಟನೆಯು ಬಾಂಬ್‌ ದಾಳಿಯ ಹೊಣೆ ಹೊತ್ತುಕೊಂಡಿಲ್ಲ. ಈ ಮಧ್ಯೆ ಇಂಫಾಲ್‌ ಪಶ್ಚಿಮ ಜಿಲ್ಲೆಯ ಲಾಮ್‌ಫೆಲ್‌ಪಾತ್‌ನಲ್ಲಿರುವ ಯುನೈಟೆಡ್ ಕಮಿಟಿ ಮಣಿಪುರ ಎಂಬ ಸಂಘಟನೆಯ ಕಚೇರಿಗೆ ಕೆಲವು ಅಪರಿಚಿತ ವ್ಯಕ್ತಿಗಳು ಬೆಂಕಿ ಹಚ್ಚಿದ್ದಾರೆ’ ಎಂದಿದ್ದಾರೆ.

‘ಅಲ್ಲದೇ ಇಂಫಾಲ್‌ ಪೂರ್ವ ಜಿಲ್ಲೆಯಲ್ಲಿರುವ ಶಾಲೆಯೊಂದರ ಆಡಳಿತ ವಿಭಾಗಕ್ಕೆ ಕೆಲವು ಅಪರಿಚಿತ ವ್ಯಕ್ತಿಗಳು ಶುಕ್ರವಾರ ಬೆಂಕಿ ಹಚ್ಚಿದ್ದಾರೆ. ಶಾಲೆಯ ಆವರಣದಲ್ಲಿದ್ದ ವಾಹನವೂ ಸುಟ್ಟು ಕರಕಲಾಗಿದೆ’ ಎಂದೂ ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT