ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರತಾ ಲೋಪ: ಮಹೇಶ್‌ ಕುಮಾವತ್‌ ಪೊಲೀಸ್‌ ಕಸ್ಟಡಿ ಅವಧಿ ವಿಸ್ತರಣೆ

Published 23 ಡಿಸೆಂಬರ್ 2023, 13:51 IST
Last Updated 23 ಡಿಸೆಂಬರ್ 2023, 13:51 IST
ಅಕ್ಷರ ಗಾತ್ರ

ನವದೆಹಲಿ: ಸಂಸತ್‌ನ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್‌ ವಶದಲ್ಲಿರುವ ಆರೋಪಿ ಮಹೇಶ್‌ ಕುಮಾವತ್‌ ಅವರ ಪೊಲೀಸ್‌ ವಶದ ಅವಧಿಯನ್ನು ಜನವರಿ 5ರವರೆಗೆ ವಿಸ್ತರಿಸಿ ಇಲ್ಲಿಯ ನ್ಯಾಯಾಲಯವೊಂದು ಶನಿವಾರ ಆದೇಶ ಹೊರಡಿಸಿತು.

ಪ್ರಕರಣದ ಸಂಚನ್ನು ಸಂಪೂರ್ಣವಾಗಿ ಬಯಲಿಗೆಳೆಯಲು ಕುಮಾವತ್‌ ಅವರನ್ನು ವಿಚಾರಣೆಗೆ ಒಳಪಡಿಸಬೇಕಿದೆ. ಹಾಗಾಗಿ ಅವರ ಪೊಲೀಸ್‌ ವಶದ ಅವಧಿಯನ್ನು ವಿಸ್ತರಿಸಬೇಕು ಎಂದು ದೆಹಲಿ ಪೊಲೀಸರು ನ್ಯಾಯಾಲಯವನ್ನು ಕೋರಿದರು. ಬಳಿಕ, ವಿಶೇಷ ನ್ಯಾಯಾಧೀಶೆ ಹರದೀಪ್‌ ಕೌರ್‌ ಅವರು ಅವಧಿ ವಿಸ್ತರಿಸಿದರು.

ಆರೋಪಿಗಳಾದ ಕುಮಾವತ್‌ ಮತ್ತು ಲಲಿತ್‌ ಝಾ ಅವರು ಗುರುವಾರ ರಾತ್ರಿ ತಾವಾಗಿಯೇ ಪೊಲೀಸ್ ಠಾಣೆಯೊಂದಕ್ಕೆ ಬಂದು ಶರಣಾದರು. ಅವರನ್ನು ಪೊಲೀಸ್‌ ವಿಶೇಷ ಘಟಕದ ವಶಕ್ಕೆ ನೀಡಲಾಯಿತು. ಆಗಿನಿಂದಲೇ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಆರೋಪಿಗಳಾದ ಮನೋರಂಜನ್‌ ಡಿ. ಸಾಗರ್‌ ಶರ್ಮಾ, ಅಮೋಲ್‌ ಧನರಾಜ್‌ ಶಿಂದೆ ಮತ್ತು ನೀಲಂ ದೇವಿ ಅವರ ಪೊಲೀಸ್‌ ವಶದ ಅವಧಿಯನ್ನು ಜನವರಿ 5ರ ವರೆಗೆ ವಿಸ್ತರಿಸಿ ಈಚೆಗಷ್ಟೇ ನ್ಯಾಯಾಲಯ ಆದೇಶ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT