ಮದುರೈ: ‘ಕೆಲ ಸ್ಥಳಗಳಲ್ಲಿ, ಅದರಲ್ಲೂ ವಿಶೇಷವಾಗಿ ದೇವಸ್ಥಾನಗಳಲ್ಲಿನ ‘ವಿಐಪಿ ಸಂಸ್ಕೃತಿ’ಯಿಂದ ಜನರು ಹತಾಶರಾಗಿದ್ದಾರೆ’ ಎಂದು ಮದ್ರಾಸ್ ಹೈಕೋರ್ಟ್‌ನ ಮದುರೈ ಪೀಠ ಬುಧವಾರ ಹೇಳಿದೆ.

‘ಗಣ್ಯ ವ್ಯಕ್ತಿಗಳು ಹಾಗೂ ಅವರ ಕುಟುಂಬ ಸದಸ್ಯರಿಗೆ ಮಾತ್ರ ದೇವಸ್ಥಾನಗಳಲ್ಲಿ ವಿಐಪಿ ಪ್ರವೇಶಕ್ಕೆ ಅವಕಾಶ ಕಲ್ಪಿಸಬೇಕು. ಗಣ್ಯರ ಸಂಬಂಧಿಕರಿಗೆ ಈ ಸೌಲಭ್ಯ ನೀಡಬಾರದು’ ಎಂದು ನ್ಯಾಯಮೂರ್ತಿ ಎಸ್.ಎಂ.ಸುಬ್ರಮಣಿಯಮ್ ಹೇಳಿದರು.

ದಾಳಿ ನಡೆದರೆ ಅಣ್ವಸ್ತ್ರ ಮೂಲಕ ಪ್ರತ್ಯುತ್ತರ: ಪಾಕ್ ಅಧ್ಯಕ್ಷ ಆರಿಫ್ ಅಲ್ವಿ

ತೂತ್ತುಕುಡಿ ಜಿಲ್ಲೆಯ ತಿರುಚೆಂಡೂರ್‌ನಲ್ಲಿರುವ ಪ್ರಸಿದ್ಧ ಅರುಳ್‌ಮಿಗು ಸುಬ್ರಮಣ್ಯಸ್ವಾಮಿ ದೇವಸ್ಥಾನದಲ್ಲಿರುವ ವಿಶೇಷ ದರ್ಶನ ವ್ಯವಸ್ಥೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ಪೀಠ ನಡೆಸಿತು.

‘ಕೆಲ ದೇವಸ್ಥಾನಗಳಲ್ಲಿ ವಿಶೇಷ ದರ್ಶನ ವ್ಯವಸ್ಥೆ ಇರಬೇಕು ಎಂಬ ವಾದ ಸರಿ. ಆದರೆ, ಎಲ್ಲ ನಾಗರಿಕರು ಸಮಾನ ಎಂಬ ಆಶಯಕ್ಕೆ ಈ ವ್ಯವಸ್ಥೆ ಧಕ್ಕೆ ತರಬಾರದು. ಅದರಲ್ಲೂ, ದೇವಸ್ಥಾನಗಳಂತಹ ಸ್ಥಳಗಳಲ್ಲಿ ಈ ವಿಐಪಿ ಸಂಸ್ಕೃತಿಯಿಂದ ಜನರು ರೋಸಿ ಹೋಗಿದ್ದಾರೆ. ಅವರು ಶಾಪ ಹಾಕುತ್ತಿದ್ದಾರೆ’ ಎಂದು ನ್ಯಾಯಮೂರ್ತಿಸುಬ್ರಮಣಿಯಮ್ ಹೇಳಿದರು.

ಮುಸ್ಲಿಂ ವ್ಯಾಪಾರಿಗಳ ಅನುಪಸ್ಥಿತಿಯಲ್ಲಿ ಕಾಪು ಜಾತ್ರೆ ಮುಕ್ತಾಯ

ಸಾರ್ವಜನಿಕ ದರ್ಶನಕ್ಕೆ ತೊಂದರೆಯಾಗದ ರೀತಿಯಲ್ಲಿ ವಿಶೇಷ ದರ್ಶನ ವ್ಯವಸ್ಥೆ ಮಾಡುವುದು ಆಯಾ ದೇವಸ್ಥಾನಗಳ ಆಡಳಿತ ಮಂಡಳಿಗಳ ಕರ್ತವ್ಯ ಎಂದೂ ಅವರು ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.