ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸತ್ತಿನ ಭದ್ರತಾ ಲೋಪ- ಚರ್ಚೆಯಿಂದ ತಪ್ಪಿಸಿಕೊಳ್ಳುತ್ತಿರುವ ಪ್ರಧಾನಿ: ಕಾಂಗ್ರೆಸ್

Published 17 ಡಿಸೆಂಬರ್ 2023, 16:10 IST
Last Updated 17 ಡಿಸೆಂಬರ್ 2023, 16:10 IST
ಅಕ್ಷರ ಗಾತ್ರ

ನವದೆಹಲಿ: ಸಂಸತ್ತಿನ ಭದ್ರತಾ ಲೋಪದ ಮೇಲಿನ ಚರ್ಚೆಯಿಂದ ಪ್ರಧಾನಿ ನರೇಂದ್ರ ಮೋದಿ ಅವರು ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷವು ಭಾನುವಾರ ಆರೋಪಿಸಿದೆ. ಲೋಕಸಭೆಯೊಳಕ್ಕೆ ಜಿಗಿದವರಿಗೆ ಪಾಸ್ ದೊರಕಿಸಿಕೊಡುವಲ್ಲಿ ಮೈಸೂರು ಸಂಸದ, ಬಿಜೆಪಿಯ ಪ್ರತಾಪ್ ಸಿಂಹ ಅವರ ಪಾತ್ರದ ಬಗ್ಗೆ ಪ್ರಶ್ನೆಗಳು ಎದುರಾಗುತ್ತವೆ ಎಂಬ ಕಾರಣಕ್ಕೆ ಪ್ರಧಾನಿ ಹೀಗೆ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ದೂರಿದೆ.

ಭದ್ರತಾ ಲೋಪದ ವಿಚಾರವಾಗಿ ಜಗಳ ಬೇಡ ಎಂದು ಪ್ರಧಾನಿ ಮೋದಿ ಹೇಳಿದ ನಂತರದಲ್ಲಿ ಕಾಂಗ್ರೆಸ್ ಈ ಮಾತು ಹೇಳಿದೆ. ‘ಡಿಸೆಂಬರ್ 13ರಂದು ಲೋಕಸಭೆಯಲ್ಲಿ ನಡೆದ ಅಸಾಮಾನ್ಯ ವಿದ್ಯಮಾನದ ವಿಚಾರವಾಗಿ ಪ್ರಧಾನಿಯವರು ಕೊನೆಗೂ ಮೌನ ಮುರಿದಿದ್ದಾರೆ. ತನಿಖೆ ಆಗಬೇಕು; ಚರ್ಚೆ ಅಲ್ಲ, ತನಿಖೆಯು ನಡೆದಿದೆ ಎಂದು ಪ್ರಧಾನಿ ಹೇಳಿದ್ದಾರೆ. ಇಂಡಿಯಾ ಮೈತ್ರಿಕೂಟದ ಪಕ್ಷಗಳು ಕೇಳುತ್ತಿರುವುದು ಹಾಗೂ ಮುಂದೆಯೂ ಕೇಳಲಿರುವುದು ಡಿಸೆಂಬರ್ 13ರಂದು ಆಗಿದ್ದೇನು ಹಾಗೂ ನಿರ್ದಿಷ್ಟವಾಗಿ ಅದು ಹೇಗೆ ಆಯಿತು ಎಂಬ ಪ್ರಶ್ನೆಯನ್ನು’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ‘ಎಕ್ಸ್‌’ನಲ್ಲಿ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT