ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಡಮಾನ್‌ ಮತ್ತು ನಿಕೋಬಾರ್‌: ’ವೇಗದ ಇಂಟರ್‌ನೆಟ್‌ ಸೇವೆ’ ಉದ್ಘಾಟನೆ

Last Updated 10 ಆಗಸ್ಟ್ 2020, 6:41 IST
ಅಕ್ಷರ ಗಾತ್ರ

ನವದೆಹಲಿ: ಅಂಡಮಾನ್‌ ಮತ್ತು ನಿಕೊಬಾರ್‌ ದ್ವೀಪರಾಷ್ಟ್ರದ ಬಹುಭಾಗಕ್ಕೆ ವೇಗದ ಇಂಟರ್ನೆಟ್‌ (ಹೈಸ್ಪೀಡ್‌ ಇಂಟರ್‌ನೆಟ್‌) ಸೌಲಭ್ಯ ಕಲ್ಪಿಸಲು ನೆರವಾಗುವಂತಹ ’ಆಪ್ಟಿಕಲ್ ಫೈಬರ್ ಕೇಬಲ್‌’ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರ ಉದ್ಘಾಟಿಸಿದರು.

ಇದು ದೇಶದ ಪ್ರಮುಖ ಭೂಭಾಗದಲ್ಲಿನ ನಗರಗಳಲ್ಲಿ ದೊರೆಯುವಂತಹ ವೇಗದ ಇಂಟರ್‌ನೆಟ್‌ ಬ್ರಾಡ್‌ಬ್ಯಾಂಡ್ ಸಂಪರ್ಕವನ್ನು ದ್ವೀಪರಾಷ್ಟ್ರದ ಬಹುಭಾಗಕ್ಕೆ ಒದಗಿಸುವ ಯೋಜನೆಯಾಗಿದೆ.

ಚೆನ್ನೈ– ಅಂಡಮಾನ್‌ ಮತ್ತು ನಿಕೊಬಾರ್‌ ದ್ವೀಪಗಳಿಗೆ (ಸಿಎಎನ್‌ಐ) ಸಾಗರದ ಒಳಗೆ (ಜಲಾಂತರ್ಗಾಮಿ) 2312 ಕಿ.ಮೀ ದೂರದವರೆಗೆ ಆಪ್‌ಟಿಕಲ್‌ ಫೈಬರ್ ಕೇಬಲ್‌ ಮೂಲಕ ಸಂಪರ್ಕ ಕಲ್ಪಿಸುವ ಈ ಇಂಟರ್‌ನೆಟ್‌ ಯೋಜನೆಗೆ ಡಿ.30,2018ರಂದು ಪ್ರಧಾನಿಯವರು ಅಡಿಗಲ್ಲು ಹಾಕಿದ್ದರು.

ವಿಡಿಯೊ ಲಿಂಕ್‌ ಮೂಲಕ ಯೋಜನೆ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ,’ಚೆನ್ನೈನಿಂದ ಪೋರ್ಟ್‌ ಬ್ಲೇರ್‌, ಪೋರ್ಟ್‌ಬ್ಲೇರ್‌ನಿಂದ ಲಿಟಲ್ ಅಂಡಮಾನ್‌ ಮತ್ತು ನಿಕೊಬಾರ್‌ ಮತ್ತು ಪೋರ್ಟ್‌ ಬ್ಲೇರ್‌ನಿಂದ ಸ್ವರಾಜ್‌ ದೀಪದವರೆಗೆ, ಒಟ್ಟು ದ್ವೀಪರಾಷ್ಟ್ರದ ಬಹು ಭಾಗದಲ್ಲಿ ಇಂದಿನಿಂದ ಈ ಯೋಜನೆಯ ಸೇವೆ ಲಭ್ಯವಾಗಲಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT