ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Mann Ki Baat | ಭಾರತ ಭಯೋತ್ಪಾದನೆಯನ್ನು ಧೈರ್ಯದಿಂದ ಎದುರಿಸುತ್ತಿದೆ– ಮೋದಿ

Published 26 ನವೆಂಬರ್ 2023, 7:25 IST
Last Updated 26 ನವೆಂಬರ್ 2023, 7:25 IST
ಅಕ್ಷರ ಗಾತ್ರ

ನವದೆಹಲಿ: 26/11 ಮುಂಬೈ ಭಯೋತ್ಪಾದನಾ ದಾಳಿಗೆ 15 ವರ್ಷ. ಭಾರತವು ಈ ದಿನ ಅತ್ಯಂತ ಘೋರ ದಾಳಿಯನ್ನು ಎದುರಿಸಿದೆ ಆದರೆ ಆ ದಾಳಿಯಿಂದ ಚೇತರಿಸಿಕೊಂಡಿದೆ ಮತ್ತು ಅದು ಭಯೋತ್ಪಾದನೆಯನ್ನು ಧೈರ್ಯದಿಂದ ಹತ್ತಿಕ್ಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು

107ನೇ ಆವೃತ್ತಿಯ ಮಾಸಿಕ ಮನ್‌ ಕಿ ಬಾತ್‌ ಕಾರ್ಯಕ್ರಮದಲ್ಲಿ ಇಂದು (ಭಾನುವಾರ) ದೇಶವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು.

‘ನವೆಂಬರ್ 26 ಅನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ. ಈ ದಿನವೇ ದೇಶದಲ್ಲಿ ಅತ್ಯಂತ ಘೋರ ಭಯೋತ್ಪಾದಕ ದಾಳಿ ನಡೆಯಿತು. ಭಯೋತ್ಪಾದಕರು ಮುಂಬೈ ಮತ್ತು ಇಡೀ ದೇಶವನ್ನು ಬೆಚ್ಚಿಬೀಳಿಸಿದ್ದಾರೆ. ಆದರೆ, ಆ ದಾಳಿಯಿಂದ ಚೇತರಿಸಿಕೊಂಡಿದ್ದು ಭಾರತದ ಸಾಮರ್ಥ್ಯವಾಗಿದೆ. ಈಗ ನಾವು ಭಯೋತ್ಪಾದನೆಯನ್ನು ಸಂಪೂರ್ಣ ಧೈರ್ಯದಿಂದ ಹತ್ತಿಕ್ಕುತ್ತಿದ್ದೇವೆ’ ಎಂದು ಮೋದಿ ಪ್ರತಿಪಾದಿಸಿದರು. ಇದೇ ವೇಳೆ ಮುಂಬೈ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಎಲ್ಲರಿಗೂ ಮೋದಿ ಗೌರವ ಸಲ್ಲಿಸಿದರು. ಧೈರ್ಯಶಾಲಿ ಹುತಾತ್ಮರನ್ನು ರಾಷ್ಟ್ರವು ನೆನಪಿಸಿಕೊಳ್ಳುತ್ತಿದೆ ಎಂದರು.

ಮುಖ್ಯಾಂಶಗಳೆಂದರೆ..

  • ‘ಸ್ವಚ್ಛ ಭಾರತ್ ಅಭಿಯಾನ’ ಮತ್ತು ‘ವೋಕಲ್‌ ಫಾರ್‌ ಲೋಕಲ್‌’ ಅಭಿಯಾನಗಳನ್ನು ಶ್ಲಾಘಿಸಿದರು. ಸ್ವಚ್ಛತೆ ಒಂದು ದಿನದ ಅಭಿಯಾನವಲ್ಲ, ಬದಲಾಗಿ ಜೀವನದ ಭಾಗ ಎಂದು ಕರೆ ನೀಡಿದರು.

  • ‘ಸ್ಥಳೀಯ ಉತ್ಪನ್ನಗಳನ್ನು ಬಳಸುವ ಈ ಆಶಯವು ಹಬ್ಬಗಳಿಗೆ ಸೀಮಿತವಾಗಿರಬಾರದು. ಮದುವೆಯ ಸೀಸನ್ ಬರಲಿರುವುದರಿಂದ ಮದುವೆಯ ಶಾಪಿಂಗ್‌ನಲ್ಲಿ ಸ್ಥಳೀಯ ಉತ್ಪನ್ನಗಳಿಗೆ ಪ್ರಾಮುಖ್ಯತೆ ನೀಡುವಂತೆ ನಾನು ನಿಮ್ಮನ್ನು ಒತ್ತಾಯಿಸುತ್ತೇನೆ’. ಎಂದರು.

  • ಭಾರತದಲ್ಲಿ ಮದುವೆಯಾಗುವ ಬದಲು ಹಲವು ವಿದೇಶದಲ್ಲಿ ಮದುವೆಯಾಗಬೇಕೆಂದೆ ತೆರಳುತ್ತಾರೆ. ಕೆಲವರಿಗೆ ಅಗತ್ಯ ಎಂದು ನನಗೆ ತಿಳಿದಿದೆ. ಆದರೆ ಈ ಮಟ್ಟದಲ್ಲಿಯೂ ಸಹ ಸ್ಥಳೀಯ ಉತ್ಪನ್ನಗಳನ್ನು ಗಂಭೀರವಾಗಿ ತೆಗೆದುಕೊಳ್ಳೋಣ. ಈಗ ಅಲ್ಲಿ (ವಿದೇಶದಲ್ಲಿ) ಸೌಲಭ್ಯಗಳು ಇರಬಹುದು, ಆದರೆ ಶೀಘ್ರದಲ್ಲೇ ಭಾರತ ಆ ಮಟ್ಟಕ್ಕೆ ಬೆಳೆಯುತ್ತದೆ ಎಂದರು.

  • ಯುಪಿಐ ಪಾವತಿಯ ಬಗ್ಗೆ ಮಾತನಾಡಿದ ಅವರು, ಕಳೆದ ಕೆಲವು ತಿಂಗಳುಗಳಿಂದ ದೇಶದಲ್ಲಿ ಯುಪಿಐ ಪಾವತಿ ಬಳಕೆ ಹೆಚ್ಚಾಗಿದೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಹೆಚ್ಚಲಿ ಎಂದು ಬಯಸುತ್ತೇನೆ ಎಂದರು.

  • ಆಜಾದಿ ಕಾ ಅಮೃತ ಮಹೋತ್ಸವದ ವೇಳೆ ಹಮ್ಮಿಕೊಂಡಿದ್ದ ಮೇಳಗಳಲ್ಲಿನ ಛಾಯಾಗ್ರಹಣ ಪ್ರಶಸ್ತಿಗಳನ್ನು ಪ್ರಧಾನಿ ಮೋದಿ ಘೋಷಿಸಿದರು.

  • ಗುಜರಾತ್‌ನ ಸೂರತ್ ನಗರದಲ್ಲಿ ಸ್ವಚ್ಛತೆ ಮತ್ತು ಸುಸ್ಥಿರ ಬೆಳವಣಿಗೆಯನ್ನು ಉತ್ತೇಜಿಸಲು ‘ಪ್ರಾಜೆಕ್ಟ್ ಸೂರತ್’ ಸಜ್ಜಾಗಿದೆ ಎಂದು ಮನ್ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ.

  • ಈ ವರ್ಷ ಭಾರತಕ್ಕೆ ಅಪಾರ ಸಾಧನೆಗಳ ವರ್ಷವಾಗಿದೆ ಎಂದರು. ಇದೇ ವೇಳೆ ನವೆಂಬರ್ 27 ರಂದು ಆಚರಿಸಲಾಗುವ ಗುರುನಾನಕ್ ಜಯಂತಿ ಮತ್ತು ಕಾರ್ತಿಕ ಪೂರ್ಣಿಮೆಯ ಶುಭಾಶಯಗಳನ್ನು ಜನರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT