ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಹುಲ್‌ರಿಂದ ಕಾಂಗ್ರೆಸ್‌ಗೆ ಪೆಟ್ಟು: ಮುಖರ್ಜಿ ಕುರಿತ ಪುಸ್ತಕದಲ್ಲಿ ಪ್ರಸ್ತಾಪ

ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಕುರಿತ ಪುಸ್ತಕದಲ್ಲಿ ಪ್ರಸ್ತಾಪ
Published 6 ಡಿಸೆಂಬರ್ 2023, 16:44 IST
Last Updated 6 ಡಿಸೆಂಬರ್ 2023, 16:44 IST
ಅಕ್ಷರ ಗಾತ್ರ

ನವದೆಹಲಿ: ಗಾಂಧಿ–ನೆಹರೂ ಕುಟುಂಬದ ಆರಾಧನೆ, ರಾಹುಲ್‌ ಗಾಂಧಿಗೆ ಇದ್ದ ರಾಜಕೀಯ ತಿಳಿವಳಿಕೆಯ ಕೊರತೆ ಸೇರಿದಂತೆ ರಾಜಕೀಯ ಸ್ಥಿತ್ಯಂತರ ಕುರಿತು ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರು ತಮ್ಮ ಡೈರಿಯಲ್ಲಿ ಉಲ್ಲೇಖಿಸಿರುವ ವಿವರವು ಈಗ ಪುಸ್ತಕ ರೂಪದಲ್ಲಿ ಹೊರಬರುತ್ತಿದೆ.

ಪ್ರಣಬ್‌ ಅವರ ಪುತ್ರಿ ಶರ್ಮಿಷ್ಟಾ ಬರೆದಿರುವ ‘ಪ್ರಣಬ್‌: ನನ್ನ ಅಪ್ಪ’ ಹೆಸರಿನ ಈ ಪುಸ್ತಕವು ಸೋಮವಾರ ಲೋಕಾರ್ಪಣೆಯಾಗಲಿದೆ.   

‘ಕಾಂಗ್ರೆಸ್‌ ನಾಯಕ ರಾಹುಲ್‌ ಅವರಿಗೆ ವೈಯಕ್ತಿಕ ವರ್ಚಸ್ಸು ಇರಲಿಲ್ಲ. ರಾಜಕೀಯ ತಿಳಿವಳಿಕೆ ಕೊರತೆಯೂ ಇತ್ತು. ಇದು ಕಾಂಗ್ರೆಸ್‌ಗೆ ಸಮಸ್ಯೆಯಾಗಿ ಕಾಡುತ್ತಿತ್ತು’ ಎಂದು ಪ್ರಣಬ್‌ ಅವರು ಡೈರಿಯಲ್ಲಿ ಉಲ್ಲೇಖಿಸಿದ್ದಾರೆ.

‘ರಾಜಕೀಯ ಎಂಬುದು ದಿನದ 24 ಗಂಟೆಗಳ ಹಾಗೂ ವರ್ಷದ 365 ದಿನಗಳ ಉದ್ಯೋಗವಾಗಿದೆ. ಆದರೆ, ರಾಹುಲ್‌ ಆಗಿಂದಾಗ್ಗೆ ರಾಜಕೀಯದಿಂದ ಬಿಡುವು ಪಡೆಯುತ್ತಿದ್ದರು. ರಾಜಕೀಯದ ಬಗ್ಗೆ ಅವರಲ್ಲಿದ್ದ ಗ್ರಹಿಕೆಯ ಕೊರತೆಯಿಂದಾಗಿ 2014ರ ಲೋಕಸಭಾ ಚುನಾವಣೆಯಲ್ಲಿ ಅವರಿಗೆ ಸೋಲು ಬೆನ್ನತ್ತಿತ್ತು’ ಎಂದು ಪ್ರಣಬ್‌ ಹೇಳಿದ್ದಾರೆ.

‘ಗಾಂಧಿ–ನೆಹರೂ ವಂಶಾವಳಿಗೆ ಇದ್ದ ರಾಜಕೀಯ ವಿವೇಚನಾ ಶಕ್ತಿ ರಾಹುಲ್‌ಗೆ ಇರಲಿಲ್ಲ. ಆದರೆ, ತನ್ನ ವಂಶಾವಳಿ ಬಗೆಗಿನ ಗರ್ವವನ್ನಷ್ಟೇ ಅವರು ಹೊಂದಿದ್ದರು’ ಎಂದು ಪ್ರಣವ್‌ ಬರೆದಿರುವ ಸಾಲುಗಳನ್ನು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

ಪ್ರಧಾನಿಯಾಗಿದ್ದ ಡಾ.ಮನಮೋಹನ್‌ ಸಿಂಗ್‌ ಅವರು ತಪ್ಪಿತಸ್ಥ ಶಾಸಕರಿಗೂ ಶಿಕ್ಷೆ ವಿಧಿಸುವುದಕ್ಕೆ ಸಂಬಂಧಿಸಿದಂತೆ ಸುಗ್ರೀವಾಜ್ಞೆಯನ್ನು ಜಾರಿಗೊಳಿಸಿದ್ದರು. ಆದರೆ, ಪ್ರಚಾರಕ್ಕಾಗಿ ರಾಹುಲ್‌ ಇದನ್ನು ವಿರೋಧಿಸಿದ್ದರು. ಆಗ ರಾಹುಲ್‌ ಬಗ್ಗೆ ಪ್ರಣಬ್‌ ಕೋಪಗೊಂಡಿದ್ದ ಬಗ್ಗೆಯೂ ಪುಸ್ತಕದಲ್ಲಿ ವಿವರಿಸಲಾಗಿದೆ. ‌

ಪ್ರಣಬ್‌ ಅವರಿಗೆ ದೇಶದ ಪ್ರಧಾನಿಯಾಗುವ ಹೆಬ್ಬಯಕೆ ಇತ್ತು. ಆದರೆ, ಅದು ಕೈಗೂಡಲಿಲ್ಲ. ಅಪ್ಪನ ಡೈರಿ, ತನಗೆ ಹೇಳಿದ್ದ ರಾಜಕೀಯ ಕಥನಗಳು ಸೇರಿದಂತೆ ವೈಯಕ್ತಿಕ ನೆಲೆಗಟ್ಟಿನಲ್ಲಿ ಸಂಶೋಧನೆ ನಡೆಸಿ ಶರ್ಮಿಷ್ಟಾ ಅವರು ಈ ಪುಸ್ತಕ ಬರೆದಿದ್ದಾರೆ.

ದೇಶಕ್ಕೆ ನೆಹರೂ ಹಾಗೂ ಇಂದಿರಾಗಾಂಧಿ ನೀಡಿರುವ ಕೊಡುಗೆಗಳನ್ನು ಪರಿಗಣಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರಣಬ್‌ ನೀಡಿದ್ದ ಸಲಹೆ ಬಗ್ಗೆಯೂ ಇದರಲ್ಲಿ ಪ್ರಸ್ತಾಪಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT