ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಷ್ಕರ್‌ ಎ ತಯಬಾ ಘಟಕ ಭೇದಿಸಿದ ಪಂಜಾಬ್ ‍ಪೊಲೀಸರು: ಇಬ್ಬರ ಬಂಧನ

Published 14 ಅಕ್ಟೋಬರ್ 2023, 6:17 IST
Last Updated 14 ಅಕ್ಟೋಬರ್ 2023, 6:17 IST
ಅಕ್ಷರ ಗಾತ್ರ

ಚಂಡೀಗಢ: ಜಮ್ಮು ಮತ್ತು ಕಾಶ್ಮೀರ ಮೂಲದ ಇಬ್ಬರನ್ನು ಬಂಧಿಸುವ ಮೂಲಕ ಲಷ್ಕರ್ ಎ ತಯಬಾ ಉಗ್ರ ಸಂಘಟನೆಯ ಘಟಕವನ್ನು ಭೇದಿಸಲಾಗಿದೆ ಎಂದು ಪಂಜಾಬ್‌ ಪೊಲೀಸರು ತಿಳಿಸಿದ್ದಾರೆ.

ಎರಡು ಸುಧಾರಿತ ಸ್ಫೋಟಕ ಸಾಧನಗಳು, 2 ಹ್ಯಾಂಡ್‌ ಗ್ರೆನೇಡ್‌ಗಳು, ಎರಡು ಪಿಸ್ತೂಲ್‌, 24 ಸಿಡಿಮದ್ದುಗಳು, ಒಂದು ಟೈಮರ್‌ ಸ್ವಿಚ್‌, 8 ಡಿಟೊನೇಟರ್‌ಗಳು ಹಾಗೂ ನಾಲ್ಕು ಬ್ಯಾಟರಿಗಳನ್ನು ಅವರಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಮೃತಸರದ ರಾಜ್ಯ ವಿಶೇಷ ಕಾರ್ಯಾಚರಣೆ ಪಡೆಯು ಕೇಂದ್ರ ಏಜೆನ್ಸಿಗಳ ಸಹಾಯದೊಂದಿಗೆ ಈ ಕಾರ್ಯಾಚರಣೆ ನಡೆಸಿದೆ ಎಂದು ಪೊಲೀಸ್‌ ಮಹಾನಿರ್ದೇಶಕ ಗೌರವ್‌ ಯಾದವ್‌ ತಿಳಿಸಿದ್ದಾರೆ.

‘ಅಮೃತಸರದ ರಾಜ್ಯ ವಿಶೇಷ ಕಾರ್ಯಾಚರಣೆ ದಳ ಕೇಂದ್ರ ಏಜೆನ್ಸಿ ಜತೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಲಷ್ಕರ್‌ ಎ ತಯಬಾದ ಘಟಕವನ್ನು ಭೇದಿಸಿ, ಜಮ್ಮುಕಾಶ್ಮೀರದ ಇಬ್ಬರು ನಿವಾಸಿಗಳನ್ನು ಬಂಧಿಸಲಾಗಿದೆ’ ಎಂದು ಪಂಜಾಬ್ ಪೊಲೀಸರು ‘ಎಕ್ಸ್‌’ನಲ್ಲಿ ಮಾಹಿತಿ ನೀಡಿದ್ದಾರೆ.

ಈ ಘಟಕವನ್ನು ಲಷ್ಕರ್‌ನ ಸಕ್ರೀಯ ಸದಸ್ಯನಾದ ಫಿರ್ದೌಸ್‌ ಅಹಮದ್ ಭಟ್‌ ನಿರ್ವಹಿಸುತ್ತಿದ್ದ ಎಂದು ಮಾಹಿತಿ ನೀಡಿರುವ ಯಾದವ್, ಈ ಕಾರ್ಯಾಚರಣೆ ಪಂಜಾಬ್‌ನಲ್ಲಿ ಶಾಂತಿ ಕದಡಲು ಪ್ರಯತ್ನಿಸುತ್ತಿರುವ ಉಗ್ರವಾದದ ಘಟಕಕ್ಕೆ ನೀಡಿದ ದೊಡ್ಡ ಹೊಡೆತ ಎಂದು ಅವರು ಬಣ್ಣಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT