ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ವೀಸಾ ಹಗರಣ: ಪಂಜಾಬ್‌ ಮಹಿಳೆ ಬಂಧನ

Published 22 ಫೆಬ್ರುವರಿ 2024, 15:57 IST
Last Updated 22 ಫೆಬ್ರುವರಿ 2024, 15:57 IST
ಅಕ್ಷರ ಗಾತ್ರ

ನವದೆಹಲಿ: 2009ರ ನಕಲಿ ವೀಸಾ ಹಗರಣದಲ್ಲಿ ಶಾಮೀಲಾಗಿದ್ದ ಆರೋಪದಡಿ, ಪಂಜಾಬ್‌ನ 57 ವರ್ಷದ ಮಹಿಳೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಮೋಗಾ ಜಿಲ್ಲೆಯ ರಜ್ವಿಂದರ್‌ ಕೌರ್ ಬಂಧಿತ ಮಹಿಳೆ. 2009ರ ಜುಲೈ 25ರಂದು ಈ ಹಗರಣ ಕುರಿತು ಪ್ರಕರಣ ದಾಖಲಾಗಿತ್ತು.

‘ರಜ್ವಿಂದರ್‌ ಕೌರ್, ಆಕೆಯ ಪತಿ ಸುಖ್‌ದೇವ್‌ ಸಿಂಗ್‌ ಹಾಗೂ ಅಶೋಕ್‌ ಎಂಬ ಅವರ ಸಹಚರ, ಕೆನಡಾಕ್ಕೆ ಪ್ರಯಾಣಿಸುವವರಿಗೆ ನಕಲಿ ವೀಸಾ ವ್ಯವಸ್ಥೆ ಮಾಡುತ್ತಿದ್ದರು. ಇದಕ್ಕಾಗಿ ಒಬ್ಬ ಪ್ರಯಾಣಿಕನಿಂದ ₹ 15 ಲಕ್ಷದಷ್ಟು ಪಡೆಯುತ್ತಿದ್ದರು’ ಎಂದು ಡಿಸಿಪಿ (ಐಜಿಐ ವಿಮಾನನಿಲ್ದಾಣ) ಉಷಾ ರಂಗ್ನಾನಿ ತಿಳಿಸಿದ್ದಾರೆ.

‘ಗುಪ್ತಚರ ಸಂಸ್ಥೆಯ ಮಾಹಿತಿ ಮೇರೆಗೆ ವಿಮಾನನಿಲ್ದಾಣ ಪೊಲೀಸರ ತಂಡ ಕಾರ್ಯಾಚರಣೆ ಕೈಗೊಂಡು, ನವದೆಹಲಿಯ ರೈಲು ನಿಲ್ದಾಣದಲ್ಲಿ ಬುಧವಾರ ಬಂದಿಳಿದ ಆರೋಪಿಯನ್ನು ಬಂಧಿಸಿತು’ ಎಂದು ತಿಳಿಸಿದ್ದಾರೆ.

ಸುಖದೇವ್‌ ಸಿಂಗ್‌ ಅವರನ್ನು ಈಗಾಗಲೇ ಬಂಧಿಸಲಾಗಿದ್ದರೆ, ಮತ್ತೊಬ್ಬ ಆರೋಪಿ ಅಶೋಕ್‌ ತಲೆಮರೆಸಿಕೊಂಡಿದ್ದಾಗಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT