ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಲಂಗಾಣ ಚುನಾವಣೆ: ಸಿಂಗರೇಣಿ ಕಲ್ಲಿದ್ದಲು ಗಣಿ ಕಾರ್ಮಿಕರ ಸಮಸ್ಯೆ ಆಲಿಸಿದ ರಾಹುಲ್

Published 1 ನವೆಂಬರ್ 2023, 10:40 IST
Last Updated 1 ನವೆಂಬರ್ 2023, 10:40 IST
ಅಕ್ಷರ ಗಾತ್ರ

ಹೈದರಾಬಾದ್‌: ತೆಲಂಗಾಣದಲ್ಲಿ ಚುನಾವಣೆ ಕಾವು ಹೆಚ್ಚುತ್ತಿದ್ದು, ಈ ನಡುವೆಯೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರಾಜ್ಯದ ಸಿಂಗರೇಣಿ ಕಲ್ಲಿದ್ದಲು ಗಣಿ ಕಾರ್ಮಿಕರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ಕುರಿತ ವಿಡಿಯೊವನ್ನು ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದ್ದಾರೆ.

ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಬರೆದುಕೊಂಡಿರುವ ರಾಹುಲ್‌, ‘ಕೆಲವು ದಿನಗಳ ಹಿಂದೆ ಸಿಂಗರೇಣಿ ಗಣಿಗೆ ಭೇಟಿ ನೀಡುವ ಅವಕಾಶ ನನಗೆ ಲಭಿಸಿತ್ತು. ಅಲ್ಲಿನ ನೌಕರರು ಮತ್ತು ಅಧಿಕಾರಿಗಳೊಟ್ಟಿಗೆ ಮಾತುಕತೆ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಿದೆ. ಖಾಸಗೀಕರಣವೇ ಎಲ್ಲಾ ಸಮಸ್ಯೆಗಳಿಗೆ ಮೂಲ ಕಾರಣವೆಂಬ ಸತ್ಯದ ಅರಿವಾಯಿತು’ ಎಂದು ಹೇಳಿದ್ದಾರೆ.

‘ಕಾರ್ಮಿಕರ ಜೊತೆಗಿನ ಸಂವಾದದ ಬಳಿಕ ಅವರ ಶೋಷಣೆಯ ಹಿಂದೆ ದೊಡ್ಡ ಪಿತೂರಿಯೇ ಅಡಗಿರುವುದು ನನಗೆ ಅರ್ಥವಾಗುತ್ತಿದೆ’ ಎಂದು ತಿಳಿಸಿದ್ದಾರೆ.

‘ಕಲ್ಲಿದ್ದಲು ಗಣಿಗಳ ಖಾಸಗೀಕರಣ ದೊಡ್ಡ ಪಿತೂರಿಯ ಭಾಗವಾಗಿದೆ. ಕೇಂದ್ರ ಸರ್ಕಾರದ ಈ ನೀತಿಯು ಕಾರ್ಮಿಕ ಕಾನೂನುಗಳ ಸ್ಪಷ್ಟ ಉಲ್ಲಂಘನೆಯಾಗಲಿದೆ. ಅಲ್ಲದೇ, ಅವರನ್ನು ಜೀತದಾಳು ಪದ್ಧತಿಗೆ ದೂಡುವ ಹುನ್ನಾರವೂ ಆಗಿದೆ’ ಎಂದಿದ್ದಾರೆ.

‘ದೇಶೀಯ ಗಣಿಗಳ ಖಾಸಗೀಕರಣದಿಂದ ಕಲ್ಲಿದ್ದಲು ಆಮದು ಮಾಡಿಕೊಳ್ಳುವುದು ದುಬಾರಿಯಾಗಲಿದೆ. ಬಳಿಕ ವಿದ್ಯುತ್‌ ದರ ಹೆಚ್ಚಿಸಿ ಜನರ ಜೇಬಿನಿಂದ ಹಣ ದೋಚಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ಗುಪ್ತ ತೆರಿಗೆ ವಿಧಿಸಲಿದ್ದಾರೆ. ಅದು ಅದಾನಿ ತೆರಿಗೆ ಹೊರತು ಬೇರೇನೂ ಅಲ್ಲ. ಇದು ಗೆದ್ದಲು ಒಣಮರದ ಕಾಂಡವನ್ನು ಟೊಳ್ಳಾಗಿಸಿದಂತೆ, ಜನರ ಹಣವನ್ನು ಬರಿದಾಗಿಸುವ ತಂತ್ರ ಎಂದು’ ಟೀಕಿಸಿದ್ದಾರೆ

ದೇಶದ ಆರ್ಥಿಕತೆಗೆ ಕೊಡುಗೆ ನೀಡುವ ವಲಯಗಳ ಖಾಸಗೀಕರಣಕ್ಕೆ ಕಾಂಗ್ರೆಸ್‌ ಮುಂದಾಗುವುದಿಲ್ಲ ಎಂದು ರಾಹುಲ್‌ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT