ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಸ್ಥಾನ | ಅತ್ಯಾಚಾರ ಎಸಗಿ ಬಾಲಕಿ ಕೊಲೆ: ಇಬ್ಬರು ದೋಷಿಗಳು

Published 18 ಮೇ 2024, 15:59 IST
Last Updated 18 ಮೇ 2024, 15:59 IST
ಅಕ್ಷರ ಗಾತ್ರ

ಜೈಪುರ: 14 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆಗೈದ ಪ್ರಕರಣ ಸಂಬಂಧ ರಾಜಸ್ಥಾನದ ಪೋಕ್ಸೊ ನ್ಯಾಯಾಲಯ ಶನಿವಾರ ಇಬ್ಬರು ಆರೋಪಿಗಳನ್ನು ದೋಷಿಗಳೆಂದು ಘೋಷಿಸಿದೆ.

‘ಪ್ರಕರಣ ಸಂಬಂಧ ಭಿಲ್‌ವಾಡಾ ಪೋಕ್ಸೊ ನ್ಯಾಯಾಲಯವು ಕಾಲು ಮತ್ತು ಕಾನ್ಹಾ ಎಂಬುವವರನ್ನು ದೋಷಿಗಳೆಂದು ನಿರ್ಣಯಿಸಿದ್ದು, ಸೋಮವಾರ ಶಿಕ್ಷೆ ಪ್ರಕಟಿಸಲಿದೆ. ಅಲ್ಲದೆ, ಸಾಕ್ಷ್ಯಗಳನ್ನು ನಾಶಪಡಿಸಿದ ಆರೋಪ ಹೊತ್ತಿದ್ದ ಮೂವರು ಮಹಿಳೆಯರು ಒಳಗೊಂಡಂತೆ 7 ಜನ ಆರೋಪಿಗಳನ್ನು ಪ್ರಕರಣದಿಂದ ಖುಲಾಸೆಗೊಳಿಸಿದೆ’ ಎಂದು ಸರ್ಕಾರಿ ವಿಶೇಷ ವಕೀಲ(ಎಸ್‌ಪಿಪಿ) ಮಹಾವೀರ್‌ ಸಿಂಗ್‌ ಕಿಶ್ನಾವತ್‌ ತಿಳಿಸಿದ್ದಾರೆ.

ರಾಜಸ್ಥಾನದ ಭಿಲ್‌ವಾಡಾ ಜಿಲ್ಲೆಯಲ್ಲಿ ಕಳೆದ ವರ್ಷ ಆಗಸ್ಟ್‌ 2ರಂದು ಹಸು ಮೇಯಿಸಲು ಹೋಗಿದ್ದ 14 ವರ್ಷದ ಬಾಲಕಿಯನ್ನು ಅಪಹರಿಸಿ ಆರೋಪಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಬಳಿಕ ಆಕೆ ಮೃತಪಟ್ಟಿರುವುದಾಗಿ ಭಾವಿಸಿ ಕಲ್ಲಿದ್ದಲ ಕುಲುಮೆಗೆ ಎಸೆದು ಸುಟ್ಟು ಹಾಕಿದ್ದರು. ‘ಕುಲುಮೆಗೆ ಎಸೆಯುವ ಮೊದಲು ಬಾಲಕಿಯು ಮೃತಪಟ್ಟಿರಲಿಲ್ಲ. ಬೆಂಕಿಯಲ್ಲಿ ಸುಟ್ಟು ಆಕೆ ಅಸು ನೀಗಿರುವುದಾಗಿ ವಿಧಿ ವಿಜ್ಞಾನ ವರದಿಯಿಂದ ತಿಳಿದುಬಂತು’ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT