ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾರ್ ಧಾಮ ತ್ರೀರ್ಥಯಾತ್ರಿಕರಿಗೆ ಜಿಯೊ 5ಜಿ ಸೇವೆ ಆರಂಭ

Published 27 ಏಪ್ರಿಲ್ 2023, 13:28 IST
Last Updated 27 ಏಪ್ರಿಲ್ 2023, 13:28 IST
ಅಕ್ಷರ ಗಾತ್ರ

ಡೆಹ್ರಾಡೂನ್ (ಉತ್ತರಾಖಂಡ): ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳ ಬದರೀನಾಥ ದೇಗುಲ ಇಂದು(ಏ.27) ಬೆಳಿಗ್ಗೆ ತೀರ್ಥಯಾತ್ರಿಕರಿಗೆ ತೆರೆಯಲಾಯಿತು. ಈ ವಿಶೇಷ ಸಂದರ್ಭ ಟೆಲಿಕಾಂ ಕ್ಷೇತ್ರದ ಪ್ರಮುಖ ಕಂಪನಿ ರಿಲಯನ್ಸ್ ಜಿಯೊ ತನ್ನ 5ಜಿ ನೆಟ್ವರ್ಕ್ ಸೇವೆಯನ್ನು ಚಾರ್‌ ಧಾಮಗಳಲ್ಲಿ ಆರಂಭಿದೆ ಎಂದು ಘೋಷಿಸಿದೆ.

ಕೇದಾರನಾಥ, ಬದರೀನಾಥ, ಯಮುನೋತ್ರಿ, ಗಂಗೋತ್ರಿ ದೇಗುಲಗಳಿಗೆ ತೀರ್ಥಯಾತ್ರೆ ಹೋಗುವವರು 5ಜಿ ಬಳಕೆದಾರರಾಗಿದ್ದಲ್ಲಿ ಅವರು ತಡೆರಹಿತ 5ಜಿ ಸೇವೆ ಸಿಗಲಿದೆ ಎಂದು ರಿಲಯನ್ಸ್ ಜಿಯೊ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಟೆಲಿಕಾಂ ಸೇವೆಗೆ ಬದಿರೀನಾಥ–ಕೇದಾರನಾಥ ದೇಗುಲಗಳ ಸಮಿತಿ ಅಧ್ಯಕ್ಷ ಅಜೇಂದ್ರ ಅಜಯ್ ಅವರು ಚಾಲನೆ ನೀಡಿದರು.

ಈ ವೇಳೆ ಹಾಜರಿದ್ದ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮಾತನಾಡಿ, ‘ಡಿಜಿಟಲ್ ಕ್ಷೇತ್ರದಲ್ಲಿ ಬದಲಾವಣೆ ತಂದ ರಿಲಯನ್ಸ್ ಜಿಯೊಗೆ ಧನ್ಯವಾದ‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT