ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪೋಶೆ ಪ್ರಕರಣ | ರಕ್ತ ಮಾದರಿ ಬದಲಾಗಿರುವುದು ದೃಢ: ಪೊಲೀಸರು

Published 5 ಜೂನ್ 2024, 16:26 IST
Last Updated 5 ಜೂನ್ 2024, 16:26 IST
ಅಕ್ಷರ ಗಾತ್ರ

ಪುಣೆ: ‘ಪೋಶೆ ಕಾರು ಅಪಘಾತ ಪ್ರಕರಣದಲ್ಲಿ ಕಾನೂನು ಸಂಘರ್ಷಕ್ಕೆ ಸಿಲುಕಿರುವ 17 ವರ್ಷ ವಯಸ್ಸಿನ ಬಾಲಕನ ರಕ್ತದ ಮಾದರಿಯನ್ನು ಆತನ ತಾಯಿಯ ರಕ್ತದ ಮಾದರಿಯೊಂದಿಗೆ ಬದಲಾಯಿಸಿರುವುದನ್ನು ವಿಧಿವಿಜ್ಞಾನ ಪ್ರಯೋಗಾಲಯವೊಂದು ದೃಢಪಡಿಸಿದೆ’ ಎಂದು ಪೊಲೀಸರು ನ್ಯಾಯಾಲಯಕ್ಕೆ ಬುಧವಾರ ತಿಳಿಸಿದ್ದಾರೆ. 

ರಕ್ತದ ಮಾದರಿ ಬದಲಿಸಿದ್ದ ಆರೋಪದ ಮೇಲೆ ಬಾಲಕನ ತಾಯಿಯನ್ನು ಜೂನ್‌ 1 ರಂದು ಪೊಲೀಸರು ಬಂಧಿಸಿದ್ದರು. ಸಾಕ್ಷ್ಯ ತಿರುಚಲು ಪ್ರಯತ್ನಿಸಿದ್ದ ಆರೋಪದ ಮೇಲೆ ಕಳೆದ ತಿಂಗಳೇ ಆತನ ತಂದೆಯನ್ನು ಬಂಧಿಸಿದದ್ದರು. ಅವರಿಬ್ಬರ ಪೊಲೀಸ್‌ ವಶವನ್ನು ಜೂನ್‌ 10ರ ವರೆಗೆ ವಿಸ್ತರಿಸಿ ಸೆಶನ್ಸ್‌ ನ್ಯಾಯಾಲಯವು ಆದೇಶ ನೀಡಿದೆ. 

ಮೇ 19ರಂದು ನಡೆದಿದ್ದ ಈ ಅಪಘಾತದಲ್ಲಿ ಇಬ್ಬರು ಟೆಕಿಗಳು ಮೃತಪಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT