ನವದೆಹಲಿ: ಗಣನೀಯ ಸೇವೆಗಾಗಿ 277 ಮಂದಿಗೆ ಶೌರ್ಯ ಪ್ರಶಸ್ತಿ ಸೇರಿ ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಕೇಂದ್ರ ಸರ್ಕಾರ 75ನೇ ಗಣರಾಜ್ಯೋತ್ಸವದ ಮುನ್ನಾ ದಿನವಾದ ಇಂದು ಪೊಲೀಸ್ ಪದಕಕ್ಕಾಗಿ ಆಯ್ಕೆ ಮಾಡಿದೆ.

2024ರ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಪೊಲೀಸ್, ಅಗ್ನಿಶಾಮಕ ಸೇವೆ, ಗೃಹರಕ್ಷಕ ಮತ್ತು ನಾಗರಿಕ ರಕ್ಷಣಾ ಸೇವೆಯ ಒಟ್ಟು 1,132 ಸಿಬ್ಬಂದಿಗೆ ಶೌರ್ಯ ಮತ್ತು ಸೇವಾ ಪದಕಗಳಿಗೆ ಆಯ್ಕೆ ಮಾಡಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಪದಕಗಳನ್ನು ಶೌರ್ಯಕ್ಕಾಗಿ ರಾಷ್ಟ್ರಪತಿಗಳ ಪದಕ (ಪಿಎಂಜಿ), ಶೌರ್ಯಕ್ಕಾಗಿ ಪದಕ ( ಜಿಎಂ), ವಿಶಿಷ್ಠ ಸೇವೆಗಾಗಿ ರಾಷ್ಟ್ರಪತಿಗಳ ಪದಕ(ಪಿಎಸ್‌ಎಂ) ಮತ್ತು ಮೆರಿಟೋರಿಯಸ್ ಸೇವೆಗಾಗಿ ಪದಕ (ಎಂಎಸ್‌ಎಂ) ಎಂದು ವರ್ಗೀಕರಿಸಲಾಗಿದೆ.

277 ಶೌರ್ಯ ಪ್ರಶಸ್ತಿಗಳಲ್ಲಿ , 119 ಎಡಪಂಥೀಯ ಉಗ್ರಗಾಮಿ ಪೀಡಿತ ಪ್ರದೇಶಗಳಲ್ಲಿ ನಿಯೋಜಿಸಲಾದ ಸಿಬ್ಬಂದಿಗೆ ಮತ್ತು 133 ಜಮ್ಮು ಮತ್ತು ಕಾಶ್ಮೀರ ಪ್ರದೇಶದ ಸಿಬ್ಬಂದಿಗೆ ನೀಡಲಾಗಿದೆ ಎಂದು ಹೇಳಿಕೆ ತಿಳಿಸಿದೆ.

ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ (MONUSCO) ವಿಶ್ವಸಂಸ್ಥೆಯ ಸಂಘಟನೆಯ ಸ್ಥಿರೀಕರಣ ಮಿಷನ್‌ನ ಭಾಗವಾಗಿ ಶಾಂತಿಪಾಲನೆಯ ಕಾರ್ಯದಲ್ಲಿ ಭಾಗಿಯಾದ ಇಬ್ಬರು ಗಡಿ ಭದ್ರತಾ ಪಡೆ (BSF) ಸಿಬ್ಬಂದಿಗೆ ಮರಣೋತ್ತರವಾಗಿ ಪಿಎಂಜಿ ಪದಕ ನೀಡಲಾಗಿದೆ.

ಬಿಎಸ್‌ಎಫ್ ಹೆಡ್ ಕಾನ್‌ಸ್ಟೆಬಲ್‌ಗಳಾದ ಸನ್ವಾಲಾ ರಾಮ್ ವಿಷ್ಣೋಯ್ ಮತ್ತು ಶಿಶು ಪಾಲ್ ಸಿಂಗ್ ಅವರು 2022ರ ಜುಲೈನಲ್ಲಿ ಕಾಂಗೋದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮೃತಪಟ್ಟಿದ್ದರು.

ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಸಿಬ್ಬಂದಿಗೆ ಅತಿ ಹೆಚ್ಚು ಅಂದರೆ 72 ಪದಕಗಳನ್ನು, ನಂತರ 65 ಪದಕಗಳನ್ನು ಕೇಂದ್ರ ಮೀಸಲು ಪೊಲೀಸ್ ಸಿಬ್ಬಂದಿ (ಸಿಆರ್‌ಪಿಎಫ್)ಗೆ, ಮಹಾರಾಷ್ಟ್ರದ 18, ಛತ್ತೀಸಗಢದಿಂದ 26, ಜಾರ್ಖಂಡ್‌ನ 23, ಒಡಿಶಾದಿಂದ 15, ದೆಹಲಿಯ 8 ಸಿಬ್ಬಂದಿ ಹಾಗೂ ಸಶಸ್ತ್ರ ಸೀಮಾ ಬಲ (SSB)ದ 21 ಸಿಬ್ಬಂದಿಗೆ ನೀಡಲಾಗಿದೆ.
.230 ಶೌರ್ಯ ಪದಕ ಸೇರಿದಂತೆ 954 ಸಿಬ್ಬಂದಿಗೆ ರಾಷ್ಟ್ರಪತಿಗಳ ಪೊಲೀಸ್ ಪದಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.