ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಜೋತಾ ಎಕ್ಸ್‌ಪ್ರೆಸ್‌ ಸ್ಫೋಟ ಪ್ರಕರಣ: ತೀರ್ಪು 14ಕ್ಕೆ

Last Updated 11 ಮಾರ್ಚ್ 2019, 19:49 IST
ಅಕ್ಷರ ಗಾತ್ರ

ಪಂಚಕುಲಾ: 2007 ರಲ್ಲಿ ನಡೆದ ಸಮಜೋತಾ ಎಕ್ಸ್‌ಪ್ರೆಸ್‌ ರೈಲು ಸ್ಫೋಟ ಪ್ರಕರಣದ ವಿಚಾರಣೆಯ ತೀರ್ಪು ಪ್ರಕಟಿಸುವುದನ್ನು ಎನ್‌ಐಎ ವಿಶೇಷ ನ್ಯಾಯಾಲಯ ಸೋಮವಾರ ತಡೆ ಹಿಡಿದಿದೆ. ಇದೇ 14 ರಂದು ತೀರ್ಪು ಪ್ರಕಟಿಸುವುದಾಗಿ ಹೇಳಿದೆ.

ಸ್ಫೋಟ ಸಂಬಂಧ ಕೆಲವು ಸಾಕ್ಷ್ಯಗಳನ್ನು ಹೊಂದಿರುವುದಾಗಿ ಪಾಕಿಸ್ತಾನದ ಮಹಿಳೆಯೊಬ್ಬರು ಅರ್ಜಿ ಸಲ್ಲಿಸಿದ್ದರಿಂದ ನ್ಯಾಯಾಲಯ ಈ ನಿರ್ಧಾರ ಕೈಗೊಂಡಿದೆ.

ರಹೀಲಾ ಎಲ್‌.ವಕೀಲ್‌ ಅವರ ಪರವಾಗಿ ವಕೀಲರೊಬ್ಬರು ಅರ್ಜಿ ಸಲ್ಲಿಸಿದ್ದಾರೆ ಎಂದು ಎನ್‌ಐಎ ವಕೀಲ ರಂಜನ್‌ ಮಲ್ಹೋತ್ರ ಅವರು ತಿಳಿಸಿದ್ದಾರೆ.

ಇದೇ 14 ಕ್ಕೆ ತೀರ್ಪು ಮುಂದೂಡಿರುವುದಾಗಿ ಎನ್‌ಐಎ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಜಗದೀಪ್‌ ಸಿಂಗ್ ಅವರು ಪ್ರಕಟಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಿಮ ವಾದ ಮಂಡನೆ ಇದೇ 6 ರಂದು ಮುಕ್ತಾಯವಾಗಿತ್ತು.

2007 ರ ಫೆ.18 ರಂದು ನಡೆದಿದ್ದ ಸಮಜೋತಾ ರೈಲು ಸ್ಫೋಟದಲ್ಲಿ 68 ಮಂದಿ ಸಜೀವ ದಹನವಾಗಿದ್ದರು. ಇವರಲ್ಲಿ ಹೆಚ್ಚಿನವರು ಪಾಕಿಸ್ತಾನಿ ಪ್ರಜೆಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT