ಗೋರಖ್ಪುರ, ಉತ್ತರಪ್ರದೇಶ (ಪಿಟಿಐ): ಶಾಲಾ ವಾಹನದಿಂದ ಬಿದ್ದು 10 ವರ್ಷದ ವಿದ್ಯಾರ್ಥಿನಿ ಮೃತಪಟ್ಟಿರುವ ಘಟನೆ ಕುಶಿನಗರ ಜಿಲ್ಲೆಯ ಸಾರಂಗ್ಛಾಪ್ರ ಗ್ರಾಮದಲ್ಲಿ ಶನಿವಾರ ನಡೆದಿದೆ.

ಮದನೌರ್ ಸುಕ್ರೌಲಿ ಗ್ರಾಮದ ಶಾಲೆಯಿಂದ ಕರೆದೊಯ್ಯುತ್ತಿದ್ದಾಗ ಘಟನೆ ಸಂಭವಿಸಿದೆ.ವಾಹನದ ಸಾಮರ್ಥ್ಯಕ್ಕಿಂತ ಅಧಿಕ ವಿದ್ಯಾರ್ಥಿಗಳನ್ನು ಕರೆದೊಯ್ದಿರುವುದು ಮತ್ತು ಚಾಲಕ, ರಸ್ತೆಯ ತಿರುವಿನಲ್ಲಿ ಅತಿ ವೇಗವಾಗಿ ವಾಹನ ಚಲಾಯಿಸಿದ್ದರಿಂದ ವಾಹನದ ಬಾಗಿಲಿನ ಸಮೇತ ಬಾಲಕಿ ಉರುಳಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

10 ವಿದ್ಯಾರ್ಥಿಗಳಲ್ಲಿ ಉಳಿದ 9 ಮಂದಿ ಆರೋಗ್ಯದಿಂದ ಇದ್ದಾರೆ.ಚಾಲಕ ಪರಾರಿಯಾಗಿದ್ದು, ಪ್ರಕರಣ ದಾಖಲಿಸಿಕೊಂಡು ಹುಡುಕಾಟ ನಡೆಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.