ಬುಧವಾರ, 17 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಣ ಅಕ್ರಮ ವರ್ಗಾವಣೆ ಪ್ರಕರಣ: ಸೆಂಥಿಲ್‌ ಬಾಲಾಜಿ ಇ.ಡಿ ವಶ ಜುಲೈ 1ಕ್ಕೆ ವಿಸ್ತರಣೆ

Published 25 ಜೂನ್ 2024, 14:01 IST
Last Updated 25 ಜೂನ್ 2024, 14:01 IST
ಅಕ್ಷರ ಗಾತ್ರ

ಚೆನ್ನೈ: ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ (ಇ.ಡಿ) ಬಂಧನಕ್ಕೊಳಗಾಗಿರುವ ತಮಿಳುನಾಡು ಮಾಜಿ ಸಚಿವ ವಿ. ಸೆಂಥಿಲ್‌ ಬಾಲಾಜಿ ಅವರ ಕಸ್ಟಡಿ ಅವಧಿಯನ್ನು ಸೆಶನ್ಸ್‌ ನ್ಯಾಯಾಲಯವೊಂದು ಜುಲೈ 1ರವರೆಗೆ ವಿಸ್ತರಿಸಿ ಮಂಗಳವಾರ ಆದೇಶ ಹೊರಡಿಸಿದೆ. 

ಪುಳಲ್‌ ಕೇಂದ್ರೀಯ ಕಾರಾಗೃಹದಲ್ಲಿರುವ ಸೆಂಥಿಲ್‌ ಅವರನ್ನು ವಿಡಿಯೊ ಕಾನ್ಫರೆನ್ಸ್‌ ಮೂಲಕ ಸೆಶನ್ಸ್‌ ನ್ಯಾಯಾಧೀಶ ಎಸ್‌. ಆಲಿ ಅವರ ಎದುರು ಹಾಜರುಪಡಿಸಲಾಯಿತು. ಸೆಂಥಿಲ್‌ ಸಲ್ಲಿಸಿದ್ದ ಮೂರು ಅರ್ಜಿಗಳಿಗೆ ಇ.ಡಿ ಈ ವೇಳೆ ಪ್ರತಿ ಅಫಿಡವಿಟ್‌ ಸಲ್ಲಿಸಿತು. ಈ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಾಧೀಶರು ಮುಂದಿನ ವಿಚಾರಣೆಯನ್ನು ಜುಲೈ 1ಕ್ಕೆ ನಿಗದಿಪಡಿಸಿದರು. ಅಲ್ಲಿಯವರೆಗೆ ಸೆಂಥಿಲ್‌ ಅವರ ಇ.ಡಿ ವಶದ ಅವಧಿಯನ್ನೂ ವಿಸ್ತರಿಸಿತು.

ಉದ್ಯೋಗಕ್ಕಾಗಿ ಹಣ ಹಗರಣದಲ್ಲಿ ಸೆಂಥಿಲ್‌ ಅವರನ್ನು ಇ.ಡಿ 2023ರ ಜೂನ್‌ 14ರಂದು ಬಂಧಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT