ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಭಾರತೀಯ ಪಾಪ್‌ ಐಕಾನ್‌ ‘ಉಷಾ ಉತುಪ್‘ ಪತಿ ನಿಧನ

Published 9 ಜುಲೈ 2024, 3:03 IST
Last Updated 9 ಜುಲೈ 2024, 3:03 IST
ಅಕ್ಷರ ಗಾತ್ರ

ಕೋಲ್ಕತ್ತ: ಭಾರತ ಸಿನಿಮಾ ರಂಗದ ಪಾಪ್‌ ಐಕಾನ್‌ ಖ್ಯಾತಿಯಾ ಉಷಾ ಉತುಪ್ ಅವರ ಪತಿ ಜಾನಿ ಚಾಕೊ ಉತುಪ್ ಸೋಮವಾರ ರಾತ್ರಿ ನಿಧನರಾದರು.

ಅವರಿಗೆ 78 ವರ್ಷ ವಯಸ್ಸಾಗಿತ್ತು. ಜಾನಿ ಅವರು ಪತ್ನಿ ಉಷಾ ಉತುಪ್, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ. ಇಲ್ಲಿನ ತಮ್ಮ ನಿವಾಸದಲ್ಲಿ ಹೃದಯಾಘಾತವಾಗಿ ಜಾನಿ ಮೃತಪಟ್ಟರು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. 

ಜಾನಿ ಅವರು ಚಹಾ ತೋಟವನ್ನು ಹೊಂದಿದ್ದು ಈಶಾನ್ಯ ರಾಜ್ಯಗಳಲ್ಲಿ ಚಹಾ ಉತ್ಪನ್ನಗಳ ವ್ಯವಹಾರ ನಡೆಸುತ್ತಿದ್ದರು. ಉಷಾ ಉತುಪ್ ಅವರಿಗೆ ಜಾನಿ ಎರಡನೇ ಪತಿಯಾಗಿದ್ದರು. 80ರ ದಶಕದಲ್ಲಿ ಇವರು ಮದುವೆಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT