ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಪ್ರೀಂ ಕೋರ್ಟ್ ಆವರಣದಲ್ಲಿ ಓಡಾಡಿ, ಸಮೋಸಾ ಸವಿದ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್

Published 13 ಸೆಪ್ಟೆಂಬರ್ 2023, 12:29 IST
Last Updated 13 ಸೆಪ್ಟೆಂಬರ್ 2023, 12:29 IST
ಅಕ್ಷರ ಗಾತ್ರ

ನವದೆಹಲಿ: ವಿವಿಧ ಪ್ರಕರಣಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ಸುಪ್ರೀಂ ಕೋರ್ಟ್ ಆವರಣದಲ್ಲಿ ಓಡಾಡಿದರು. ನ್ಯಾಯಾಲಯ ಪ್ರವೇಶಿಸುವ ಸಲುವಾಗಿ ಅಳವಡಿಸಿರುವ ಎಲೆಕ್ಟ್ರಾನಿಕ್ ಪಾಸ್‌ ವ್ಯವಸ್ಥೆ ವೀಕ್ಷಿಸಿದರು. ನಂತರ ಇತರ ನ್ಯಾಯಮೂರ್ತಿಗಳೊಂದಿಗೆ ಕೆಫೆಟೇರಿಯಾದಲ್ಲಿ ಸಮೋಸಾ ಸವಿದರು.

ದಿಢೀರ್ ಎಂದು ಹೊರಟ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರು ನೆರೆದಿದ್ದವರಲ್ಲಿ ಅಚ್ಚರಿ ಮೂಡಿಸಿದರು. ಅವರೊಂದಿಗೆ ನ್ಯಾಯಮೂರ್ತಿ ಹೃಷಿಕೇಶ್ ರಾಯ್, ನ್ಯಾ. ಪಿ.ಎಸ್.ನರಸಿಂಹ, ನ್ಯಾ. ಪಿ.ಎಸ್.ನರಸಿಂಹ, ನ್ಯಾ. ಪಂಕಜ್ ಮಿತ್ತಲ್ ಹಾಗೂ ನ್ಯಾ. ಮನೋಜ್ ಮಿಶ್ರಾ ಅವರೂ ಜತೆಗೂಡಿದರು.

ಕಲಾಪ ಮುಗಿಸಿ ನ್ಯಾಯಾಲಯದ ಆವರಣದಲ್ಲಿ ಓಡಾಡಿದ ನ್ಯಾ. ಚಂದ್ರಚೂಡ್, ನೇರವಾಗಿ ಕೆಫೆಟೇರಿಯಾಗೆ ಭೇಟಿ ನೀಡಿದರು. ಅಲ್ಲಿ ಸಮೋಸಾ ಮತ್ತು ಕಾಫೀ ಸವಿದರು. ನಂತರ ಎಲೆಕ್ಟ್ರಾನಿಕ್ ಪಾಸ್ ವ್ಯವಸ್ಥೆಯನ್ನು ಪರಿಶೀಲಿಸಿ, ಮಾಹಿತಿ ಪಡೆದರು. ತಮ್ಮ ಕೊಠಡಿಗೆ ಮರಳುವ ಪೂರ್ವದಲ್ಲಿ ಪತ್ರಕರ್ತರೊಂದಿಗೆ ಕೆಲ ಹೊತ್ತು ಚರ್ಚಿಸಿದರು.

ಇದಕ್ಕೂ ಮೊದಲು ಮಹತ್ವದ ವಿಷಯ ಕುರಿತ ವಿಚಾರಣೆಯಲ್ಲಿ ಮುಖ್ಯ ನ್ಯಾಯಮೂರ್ತಿ ಸಹಿತ ಐವರು ನ್ಯಾಯಮೂರ್ತಿಗಳ ಪೀಠ ಚಾಲನಾ ಪರವಾನಗಿ ಕುರಿತು ವಿಚಾರಣೆ ನಡೆಸಿತು. ಕಾರು ಚಾಲನೆಯ ಪರವಾನಗಿ ಪಡೆದ ವ್ಯಕ್ತಿಯು ಅದೇ ಗಾತ್ರದ ಸರಕು ವಾಹನ ಚಾಲನೆ ಮಾಡುವ ಅವಕಾಶ ಕಾನೂನಿನಲ್ಲಿ ಇದೆಯೇ ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ. ಲಕ್ಷಾಂತರ ಕುಟುಂಬಗಳ ಹಿತದೃಷ್ಟಿಯಿಂದ ಈ ವಿಷಯವನ್ನು ಹೊಸ ದೃಷ್ಟಿಕೋನದಿಂದ ನೋಡಬೇಕಾದ ಅಗತ್ಯವಿದೆ ಎಂದು ಪೀಠ ಅಭಿಪ್ರಾಯಪಟ್ಟಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT