ಚೆನ್ನೈ: ತಮಿಳುನಾಡು ಈರೋಡ್ ಜಿಲ್ಲೆಯ 17 ವರ್ಷದ ವಿದ್ಯಾರ್ಥಿನಿಗೆ ಅಮೆರಿಕದ ಷಿಕಾಗೊ ವಿಶ್ವವಿದ್ಯಾಲಯದಲ್ಲಿ ಪದವಿ ಶಿಕ್ಷಣಕ್ಕಾಗಿ ₹ 3 ಕೋಟಿ ವಿದ್ಯಾರ್ಥಿ ವೇತನ ದೊರೆತಿದೆ.
ಕಾಸಿಪಾಳಯಂ ಗ್ರಾಮದ ನಿವಾಸಿ ಸ್ವೆಗಾ ಸಾಮಿನಾಥನ್ ವಿದ್ಯಾರ್ಥಿ ವೇತನ ಪಡೆದ ವಿದ್ಯಾರ್ಥಿನಿ. ಇವರ ತಂದೆ ಕೃಷಿಕರು ಎಂದು ವಿದ್ಯಾರ್ಥಿನಿಗೆ ನಾಯಕತ್ವ ಅಭಿವೃದ್ಧಿಯ ಕುರಿತಂತೆ ತರಬೇತಿ ನೀಡಿರುವ ಡೆಕ್ಸ್ಟೆರಿಟಿ ಗ್ಲೋಬಲ್ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ವಿದ್ಯಾರ್ಥಿ ವೇತನ ಲಭಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಸ್ವೆಗಾ, ಇದರ ಹಿರಿಮೆಯುಡೆಕ್ಸ್ಟೆರಿಟಿ ಗ್ಲೋಬಲ್ ಸಂಸ್ಥೆ ಮತ್ತು ಅದರ ಸ್ಥಾಪಕ ಶರದ್ ಸಾಗರ್ ಅವರಿಗೆ ಸಲ್ಲಬೇಕು ಎಂದಿದ್ದಾರೆ.