ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂ ಹಕ್ಕು ಕಾಯ್ದೆ | ಟಿಡಿಪಿ ‘ಕೊಳಕು’ ರಾಜಕಾರಣದಲ್ಲಿ ತೊಡಗಿದೆ: ಆಂಧ್ರ ಸಿಎಂ ಜಗನ್

Published 4 ಮೇ 2024, 11:14 IST
Last Updated 4 ಮೇ 2024, 11:14 IST
ಅಕ್ಷರ ಗಾತ್ರ

ಅಮರಾವತಿ: ಭೂ ಹಕ್ಕು ಕಾಯ್ದೆಗೆ ಸಂಬಂಧಿಸಿದಂತೆ ಮಾಜಿ ಸಿಎಂ, ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ‘ಕೊಳಕು ರಾಜಕಾರಣ‘ ಮಾಡುತ್ತಿದ್ದಾರೆ ಎಂದು ವೈಎಸ್‌ಆರ್‌ಸಿಪಿ ನಾಯಕ ಹಾಗೂ ಆಂಧ್ರ ಪ್ರದೇಶ ಸಿಎಂ ಜಗನ್‌ ಮೋಹನ್‌ ರೆಡ್ಡಿ ಶನಿವಾರ ಆರೋಪಿಸಿದ್ದಾರೆ.

ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಅವರು, ಜಗನ್‌ ರೈತರ ಜಮೀನುಗಳನ್ನು ಕಸಿದುಕೊಳ್ಳುತ್ತಿದ್ದಾರೆ ಎಂಬ ಟಿಡಿಪಿ ನಾಯಕರ ಆರೋಪಗಳನ್ನು ತಳ್ಳಿ ಹಾಕುವ ಮೂಲಕ ತಿರುಗೇಟು ನೀಡಿದ್ದಾರೆ.

ಚುನಾವಣಾ ಸಮಯದಲ್ಲಿ ಟಿಡಿಪಿಯು ಪೂರ್ವ ನಿಯೋಜಿತ ಸುಳ್ಳು ಸುದ್ದಿಗಳನ್ನು ಸಮಾಜದಲ್ಲಿ ಪಸರಿಸುತ್ತಿದೆ. ಐವಿಆರ್‌ಎಸ್‌ ಕಾಲ್‌ಗಳನ್ನು ಜನರಿಗೆ ಕಳುಹಿಸುವ ಮೂಲಕ ನನ್ನ ವಿರುದ್ಧ ಷಡ್ಯಂತ್ರ ರೂಪಿಸಿದೆ. ಈ ಮೂಲಕ ಕೊಳಕು ರಾಜಕಾರಣದಲ್ಲಿ ತೊಡಗಿದೆ ಎಂದು ಜಗನ್ ವಾಗ್ದಾಳಿ ನಡೆಸಿದ್ದಾರೆ.

ನಾವು ಜಮೀನು ಇಲ್ಲದ ರೈತರಿಗೆ ಜಮೀನು ನೀಡುತ್ತೇವೆಯೇ ಹೊರತು ಅವರಿಂದ ಭೂಮಿಯನ್ನು ಕಸಿದುಕೊಳ್ಳುವುದಿಲ್ಲ. ರೈತರು ಅವರ ಜಮೀನುಗಳ ಮೇಲೆ ಸಂಪೂರ್ಣ ಅಧಿಕಾರ ಹೊಂದಿರುತ್ತಾರೆ. ಭೂ ಹಕ್ಕು ಕಾಯ್ದೆಯ ಬಗ್ಗೆ ಟಿಡಿಪಿ ನಾಯಕರಿಗೆ ತಿಳಿದಿಲ್ಲ ಎಂದು ಜಗನ್ ಹೇಳಿದ್ದಾರೆ.

ದಕ್ಷಿಣ ಭಾರತದಲ್ಲಿ ಹಲವು ದಶಕಗಳ ಹಿಂದೆ ಭೂ ಸಮೀಕ್ಷೆ ನಡೆದಿದೆ. ಅಧಿಕಾರಕ್ಕೆ ಬಂದರೆ ಮುಂಬರುವ ದಿನಗಳಲ್ಲಿ ಭೂ ಸಮೀಕ್ಷೆಯನ್ನು ನಡೆಸಿ ನಿಮ್ಮ ಜಮೀನುಗಳಿಗೆ ಸಂಬಂಧಿಸಿದಂತೆ ನವೀಕರಿಸಿದ ದಾಖಲೆಗಳನ್ನು ಒದಗಿಸುತ್ತೇವೆ. ಈ ಸಮೀಕ್ಷೆಯ ಮೂಲಕ ಸರ್ಕಾರದಿಂದ ಅಧಿಕೃತ ಖಾತ್ರಿ ದೊರೆಯುತ್ತದೆ ಎಂದು ಜಗನ್ ತಿಳಿಸಿದ್ದಾರೆ.

ಆಂಧ್ರ ಪದೇಶದ 175 ವಿಧಾನಸಭಾ ಸ್ಥಾನಗಳಿಗೆ ಹಾಗೂ 25 ಲೋಕಸಭಾ ಕ್ಷೇತ್ರಗಳಿಗೆ ಮೇ 13ರಂದು ಮತದಾನ ನಡೆಯಲಿದೆ. ಜೂನ್‌ 4ರಂದು ಫಲಿತಾಂಶ ಹೊರ ಬೀಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT