ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮಿತ್ ಶಾ ನಕಲಿ ವಿಡಿಯೊ ಪ್ರಕರಣ: FIR ಜತೆ ಕ್ರಿಮಿನಲ್ ಪಿತೂರಿ ದಾಖಲಿಸಿದ ಪೊಲೀಸರು

Published 4 ಮೇ 2024, 10:17 IST
Last Updated 4 ಮೇ 2024, 10:17 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭಾಷಣವನ್ನು ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿರುವ ವಿಡಿಯೊ ಪ್ರಕರಣದಲ್ಲಿ ಕಾಂಗ್ರೆಸ್‌ ಸಾಮಾಜಿಕ ಜಾಲತಾಣ ತಂಡದ ರಾಷ್ಟ್ರೀಯ ಸಂಚಾಲಕ ಅರುಣ್‌ ಬೀರೆಡ್ಡಿ ಅವರ ವಿರುದ್ಧ ಈಗಾಗಲೇ ಎಫ್‌ಐಆರ್‌ ದಾಖಲಾಗಿದ್ದು, ಈಗ ಅದರಲ್ಲಿ ಕ್ರಿಮಿನಲ್‌ ಸಂಚು ಆರೋಪವನ್ನು ಸೇರಿಸಲಾಗಿದೆ ಎಂದು ದೆಹಲಿ ಪೊಲೀಸರು ಶನಿವಾರ ತಿಳಿಸಿದರು.

ತೆಲಂಗಾಣ ಮೂಲದವರಾದ ಅರುಣ್‌ ಅವರನ್ನು ಪೊಲೀಸರು ಶುಕ್ರವಾರವೇ ಬಂಧಿಸಿದ್ದರು. ಅಮಿತ್‌ ಶಾ ಭಾಷಣ ತಿರುಚಿದ ಪ್ರಕರಣದಲ್ಲಿ ಬಂಧಿತರಾದ ಮೊದಲಿಗರು ಇವರು. 

‘ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್‌ 120ಬಿಅನ್ನು (ಕ್ರಿಮಿನಲ್‌ ಸಂಚಿಗೆ ಶಿಕ್ಷೆ) ಎಫ್‌ಐಆರ್‌ಗೆ ಸೇರಿಸಿದ್ದೇವೆ’ ಎಂದು ಪೊಲೀಸರು ತಿಳಿಸಿದರು. ಬಂಧನದ ನಂತರ ಅರುಣ್‌ ಅವರನ್ನು ನ್ಯಾಯಾಲಯದ ಎದುರು ಹಾಜರುಪಡಿಸಲಾಗಿತ್ತು. ವಿಶೇಷ ಪೊಲೀಸ್‌ ಘಟಕದಿಂದ ವಿಚಾರಣೆ ನಡೆಸುವ ಸಲುವಾಗಿ ಅವರನ್ನು ಮೂರು ದಿನಗಳ ಮಟ್ಟಿಗೆ ಪೊಲೀಸ್‌ ವಶಕ್ಕೆ ನ್ಯಾಯಾಲಯ ನೀಡಿದ್ದು, ವಿಚಾರಣೆ ಆರಂಭವಾಗಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ಕಾಂಗ್ರೆಸ್‌ನ ಸಾಮಾಜಿಕ ಜಾಲತಾಣ ನಿರ್ವಹಿಸುವವ ಪ್ರಮುಖರಲ್ಲಿ ಅರುಣ್‌ ಅವರೂ ಒಬ್ಬರು. ಅಮಿತ್‌ ಶಾ ಅವರ ಭಾಷಣ ತಿರುಚಲಾಗಿರುವ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಆರೋಪಿಗಳಲ್ಲಿ ಪ್ರಮುಖರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT