ದಿನ ಭವಿಷ್ಯ: ಜನವರಿ 9 ಶುಕ್ರವಾರ 2026– ಜನರ ಜೊತೆಯಲ್ಲಿ ಬೆರೆಯುವ ಅಭ್ಯಾಸ ಇರಲಿ
Published 8 ಜನವರಿ 2026, 18:42 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಧಾರ್ಮಿಕ ಕಾರ್ಯದಲ್ಲಿ ಭಾಗವಹಿಸುವುದರಿಂದ ಮಾನಸಿಕ ಶಾಂತಿ, ಜೀವನೋಲ್ಲಾಸ ಹೆಚ್ಚಾಗಲಿದೆ. ಮಕ್ಕಳು ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸಿ, ಏಕಾಗ್ರತೆಯನ್ನು ಕಾಯ್ದುಕೊಳ್ಳಿ.
ವೃಷಭ
ಜೊತೆಗೂಡಿ ಕೆಲಸ ಮಾಡುವುದು, ನಾಲ್ಕಾರು ಜನರ ಜೊತೆಯಲ್ಲಿ ಬೆರೆಯುವುದನ್ನು ಅಭ್ಯಾಸ ಮಾಡಿಕೊಳ್ಳಿ. ಆಫೀಸಿನಲ್ಲಿ ಉಂಟಾಗಿದ್ದ ಸಮಸ್ಯೆಗಳು ತನ್ನಿಂತಾನೆ ಬಗೆ ಹರಿಯಲಿವೆ.
ಮಿಥುನ
ಸತ್ಯ ವಾಕ್ಯಕೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು ಎಂಬುವ ಮಾತನ್ನು ನೆನಪಿನಲ್ಲಿ ಇಟ್ಟುಕೊಂಡಿರುವುದು ಒಳ್ಳೆಯದು. ಕಾರ್ಯರಂಗದಲ್ಲಿ ಅಪವಾದದ ಭೀತಿ ಕಳವಳ ಮೂಡಿಸಲಿದೆ.
ಕರ್ಕಾಟಕ
ಇಂದು ಶ್ರೀಲಕ್ಷ್ಮಿ ಸಮೇತ ವೆಂಕಟರಮಣನ ಕೃಪಾಕಟಾಕ್ಷಕ್ಕೆ ಪಾತ್ರರಾಗಿ ಶುಭವಾಗುತ್ತದೆ. ಸ್ವಂತ ಉದ್ಯೋಗದಲ್ಲಿ ಅಭಿವೃದ್ಧಿಯನ್ನು ಹೊಂದುವಿರಿ. ಸಂಬಂಧಿಗಳಿಂದ ಸಂತಸದ ಸುದ್ದಿ ಕೇಳುವಿರಿ.
ಸಿಂಹ
ದೊಡ್ಡ ಪ್ರಮಾಣದ ಸಿಹಿ ತಿಂಡಿಯ ತಯಾರಕರಿಗೆ ಕಾರ್ಮಿಕರ ಕೊರತೆ ಎದುರಾಗಲಿದೆ. ಉದ್ಯೋಗದಲ್ಲಿನ ಪ್ರಯತ್ನಗಳು ಫಲಪ್ರದ. ವಿದೇಶ ಪ್ರವಾಸದ ಯೋಗವಿದೆ.
ಕನ್ಯಾ
ಬರೆಯುತ್ತಿರುವ ಪುಸ್ತಕಕ್ಕೆ ನಿಮ್ಮ ಕಣ್ಣೆದುರು ನಡೆದ ಒಂದು ಘಟನೆ ಪ್ರೇರಣೆಯಾಗಬಹುದು. ಸರ್ಕಾರಿ ಕೆಲಸಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಿಕೊಳ್ಳುವ ಯೋಚನೆಯನ್ನು ಮಾಡಿ.
ತುಲಾ
ಕೆಲಸವನ್ನು ಹುಡುಕುವ ಬದಲು ಉನ್ನತ ವಿದ್ಯಾಭ್ಯಾಸದ ಬಗ್ಗೆ ಒಲವು ತೋರಿಸಿ. ಕುಲದೇವರ ದರ್ಶನದಿಂದ ಎಲ್ಲಾ ವ್ಯವಹಾರಗಳಲ್ಲಿ ಅಭಿವೃದ್ಧಿ ಸಾಧಿಸಬಲ್ಲಿರಿ.
ವೃಶ್ಚಿಕ
ದೈಹಿಕ ಮತ್ತು ಆರ್ಥಿಕ ಶಕ್ತಿಯನ್ನು ವ್ಯಯಿಸದೇ ಸಿಕ್ಕ ಸಮಯದಲ್ಲಿ ಕಾರ್ಯವೆಸಗುವ ಚಾಣಾಕ್ಷತನ ಇರುವುದು. ದೃಢ ನಿರ್ಧಾರ ಕೈಗೊಂಡ ಫಲದಿಂದಾಗಿ ಫಲಿತಾಂಶ ಪಡೆಯುವಿರಿ.
ಧನು
ಮದುವೆಗೆ ಸಂಬಂಧಿಸಿದ ಮಾತುಕತೆಗಳು ಗಮನಕ್ಕೆ ಬಾರದೇ ಹೋಗಬಹುದು. ನಂಬಿ ಕೆಟ್ಟವರಿಲ್ಲ ಎಂಬ ಮಾತು ನಿಮ್ಮ ಪಾಲಿಗೆ ಅಕ್ಷರಶಃ ಸತ್ಯವಾಗಲಿದೆ.
ಮಕರ
ಸಾಮರ್ಥ್ಯ, ದಕ್ಷತೆ, ಸೇವಾ ಮನೋಭಾವಗಳಿಂದ ಸಂಸ್ಥೆಯಲ್ಲಿ ಜವಾಬ್ದಾರಿಯುತ ಹುದ್ದೆ ನಿಮ್ಮದಾಗಲಿದೆ. ಸರ್ಕಾರಿ ಕೆಲಸಗಳು ಗುತ್ತಿಗೆಯಾಗಿ ಲಭಿಸುವುದರ ಜತೆಗೆ ಲಾಭದಾಯಕ ಎನಿಸಲಿದೆ.
ಕುಂಭ
ಕೂಡಿ ಬಂದಂಥ ಕಂಕಣ ಬಲವು ತಪ್ಪು ನಡತೆಯಿಂದ ಅಥವಾ ಮೂರನೇ ವ್ಯಕ್ತಿಯ ಅಸಂಬದ್ಧ ಹೇಳಿಕೆಯಿಂದ ಮುರಿದು ಬೀಳುವ ಸಾಧ್ಯತೆ ಇದೆ. ಮೇಧಾವಿಗಳಿಂದ ಧನ ಸಂಪಾದನೆ ಹೊಂದುವಿರಿ.
ಮೀನ
ಕೆಲಸದಲ್ಲಿ ವಿಘ್ನಗಳು ಎದುರಾದರೂ, ಅಪೇಕ್ಷಿತ ಫಲ ದೊರಕುವುದು. ನಿಮ್ಮಲ್ಲಿರುವ ಕಲೆಗೆ ಒಂದು ನೆಲೆ ಕಲ್ಪಿಸುವ ಹೋರಾಟವು ಸಫಲವಾಗಲಿದೆ. ಪತಿಯ ಆರೋಗ್ಯದಲ್ಲಿ ಗಮನ ಇರಿಸಿ.