ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಣಿಪುರ: 15 ದಿನಗಳಲ್ಲಿ ನಿಗಮ ಮಂಡಳಿಗಳಿಗೆ ರಾಜೀನಾಮೆ ನೀಡಿದ ಮೂವರು ಶಾಸಕರು

Published : 20 ಏಪ್ರಿಲ್ 2023, 13:37 IST
ಫಾಲೋ ಮಾಡಿ
Comments

ಇಂಪಾಲ : ಕಳೆದ ಹದಿನೈದು ದಿನಗಳಲ್ಲಿ ಮಣಿಪುರದ ಬಿರೇನ್ ಸಿಂಗ್ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಹಲವು ಬೆಳವಣಿಗೆಗಳು ನಡೆಯುತ್ತಿದ್ದು, ಈಗಾಗಲೇ ಇಬ್ಬರು ಶಾಸಕರು ನಿಗಮ ಮಂಡಳಿಯಲ್ಲಿನ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇಂದು ಮತ್ತೋರ್ವ ಶಾಸಕ ಪವೋನಮ್ ಬ್ರೋಜೆನ್ ರಾಜೀನಾಮೆ ನೀಡಿದ್ದು, ಪಕ್ಷದಲ್ಲಿ ಭಿನ್ನಾಭಿಪ್ರಾಯ ಉಂಟಾಗಿದೆ ಎಂಬ ಊಹಾಪೋಹಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ.

’ವೈಯಕ್ತಿಕ ಕಾರಣ ನೀಡಿ ಮಣಿಪುರ ಡೆವಲಪ್‌ಮೆಂಟ್‌ ಸೊಸೈಟಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ನನ್ನ ರಾಜೀನಾಮೆಯನ್ನು ಸ್ವೀಕರಿಸಬೇಕು ಎಂದು ವಿನಂತಿಸುತ್ತೇನೆ‘ ಎಂದು ಮುಖ್ಯಮಂತ್ರಿ ಬಿರೇನ್‌ ಸಿಂಗ್‌ ಅವರಿಗೆ ಬರೆದ ರಾಜೀನಾಮೆ ಪತ್ರದಲ್ಲಿ ಪವೋನಮ್ ಬ್ರೋಜೆನ್ ಉಲ್ಲೇಖಿಸಿದ್ದಾರೆ.

ಬ್ರೋಜೆನ್‌ ರಾಜೀನಾಮೆಗೂ ಮೊದಲು ಶಾಸಕ ಕರಮ್ ಶ್ಯಾಮ್ ‘ತಮಗೆ ಯಾವುದೇ ಜವಾಬ್ದಾರಿ ವಹಿಸಿಲ್ಲ‘ ಎಂಬ ಕಾರಣ ನೀಡಿ ಟೂರಿಸಂ ಕಾರ್ಪೋರೇಷನ್‌ ಮಣಿಪುರ ಲಿಮಿಟೆಡ್‌ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಏಪ್ರಿಲ್ 8 ರಂದು ಪಕ್ಷದ ಮತ್ತೊಬ್ಬ ಶಾಸಕ ತೊಕ್ಚೋಮ್ ರಾಧೇಶ್ಯಾಮ್ ಮುಖ್ಯಮಂತ್ರಿಗಳ ಸಲಹೆಗಾರ ಸ್ಥಾನವನ್ನು ತ್ಯಜಿಸಿ ರಾಜೀನಾಮೆ ಘೋಷಿಸಿದ್ದರು.

ರಾಜೀನಾಮೆ ನೀಡಿದ ಮೂವರು ದೆಹಲಿಗೆ ತೆರಳಿದ್ದು, ಕೇಂದ್ರ ನಾಯಕರನ್ನು ಭೇಟಿಯಾಗಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

ಇಷ್ಟೇ ಅಲ್ಲದೇ ಮತ್ತೊಬ್ಬ ಶಾಸಕ ಖ್ವೈರಕ್‌ಪಂ ರಘುಮಣಿ, ಫೇಸ್‌ಬುಕ್‌ನಲ್ಲಿ ತಮಗೆ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ರಾಜ್ಯ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ವಿರುದ್ಧ ಪೊಲೀಸ್‌ ದೂರು ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT