ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗೋಡೆ ಮೇಲೆ ಕೂತು ವಿಶ್ರಾಂತಿ ಪಡೆದ ಹೆಣ್ಣು ಹುಲಿ: ಹರಿದಾಡಿದ ವಿಡಿಯೊ

Published 26 ಡಿಸೆಂಬರ್ 2023, 14:03 IST
Last Updated 26 ಡಿಸೆಂಬರ್ 2023, 14:03 IST
ಅಕ್ಷರ ಗಾತ್ರ

ಪಿಲಿಭಿತ್: ಉತ್ತರ ಪ್ರದೇಶ ಅಠಕೋನಾ ಗ್ರಾಮಕ್ಕೆ ಬಂದ ಹೆಣ್ಣು ಹುಲಿಯೊಂದು ಗೋಡೆ ಮೇಲೆ ಕೂತು ವಿಶ್ರಾಂತಿ ಪಡೆಯುತ್ತಿರುವ ದೃಶ್ಯ ಸೆರೆಯಾಗಿದ್ದು, ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಪಿಲಿಭಿತ್ ಹುಲಿ ಸಂರಕ್ಷಿತ ಪ್ರದೇಶದಿಂದ ಕೆಲವೇ ಮೈಲು ದೂರದಲ್ಲಿ ಅಠಕೋನ ಗ್ರಾಮವಿದ್ದು, ಮಂಗಳವಾರ ಬೆಳಿಗ್ಗೆ ಹುಲಿಯೊಂದು ಇಲ್ಲಿ ಕಾಣಿಸಿಕೊಂಡಿತ್ತು. ತಮ್ಮನ್ನು ಕಂಡು ಓಡಿಹೋಗಬಹುದು ಅಥವಾ ದಾಳಿ ಮಾಡಬಹುದೆಂಬ ಗ್ರಾಮಸ್ಥರ ಊಹೆಯನ್ನು ಈ ಹುಲಿ ಸುಳ್ಳು ಮಾಡಿತ್ತು.

ವಿಡಿಯೊ ಹರಿದಾಡುತ್ತಿರುವುದು ತಿಳಿಯುತ್ತಿದ್ದಂತೆ ಸ್ಥಳಕ್ಕಾಮಿಸಿದ ಅರಣ್ಯ ಸಿಬ್ಬಂದಿ ಹುಲಿಯನ್ನು ರಕ್ಷಿಸಿದ್ದಾರೆ.

‘ಗ್ರಾಮದಲ್ಲಿ ಹುಲಿ ಕಾಣಿಸಿಕೊಂಡಿರುವ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಿಮಿಸಿ ಹುಲಿಯನ್ನು ರಕ್ಷಿಸಿದ್ದೇವೆ. ಇದು ಹೆಣ್ಣು ಹುಲಿಯಾಗಿದ್ದು, 2ರಿಂದ 3 ವರ್ಷ ವಯಸ್ಸಾಗಿರಬಹುದು. ಪಶುವೈದ್ಯರು ಮೇಲ್ವಿಚಾರಣೆಯಲ್ಲಿ ಹುಲಿಯನ್ನು ಬಿಡಲಾಗಿದೆ’ ಎಂದು ಪಿಲಿಭಿತ್ ಹುಲಿ ಸಂರಕ್ಷಿತ ಪ್ರದೇಶದ ಉಪನಿರ್ದೇಶಕ ನವೀನ್ ಖಂಡೇಲ್ವಾಲ್ ತಿಳಿಸಿದರು.

ಹುಲಿಯ ಶಾಂತ ವರ್ತನೆಗೆ ಕಾರಣವೇನು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಜನವಸತಿಗೆ ಹತ್ತಿರವಿರುವ ಸ್ಥಳದಲ್ಲಿ ವಾಸಿಸುತ್ತಿರುವುದರಿಂದ ಅದು ಜನರ ಕಂಡು ಭಯಪಡಲಿಲ್ಲ ಎಂದು ನನಗನಿಸುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT