ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದುಷ್ಟ ಶಕ್ತಿಗಳ ತಡೆಗೆ TMC ಕಾರ್ಯಕರ್ತರು ನಿರಂತರವಾಗಿ ಬದ್ಧತೆ ತೋರಿದ್ದಾರೆ: ಮಮತಾ

Published 1 ಜನವರಿ 2024, 10:50 IST
Last Updated 1 ಜನವರಿ 2024, 10:50 IST
ಅಕ್ಷರ ಗಾತ್ರ

ಕೋಲ್ಕತ್ತ: ಯಾವುದೇ ದುಷ್ಟ ಶಕ್ತಿಗಳನ್ನು ತಡೆಯಲು ಮತ್ತು ಜನರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ರಕ್ಷಿಸಲು ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಕಾರ್ಯಕರ್ತರು ನಿರಂತರವಾಗಿ ಅಚಲವಾದ ಬದ್ಧತೆ ಪ್ರದರ್ಶಿಸಿದ್ದಾರೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಶ್ಲಾಘಿಸಿದ್ದಾರೆ.

ಟಿಎಂಸಿಯು 1998ರ ಜನವರಿ 1ರಂದು ಸ್ಥಾಪನೆಯಾಯಿತು. ಮಾತೃಭೂಮಿಯ ಗೌರವ ಕಾಪಾಡುವುದು, ರಾಜ್ಯದ ಹಿತಾಸಕ್ತಿಯನ್ನು ಎತ್ತಿಹಿಡಿಯುವುದು ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳ ರಕ್ಷಣೆಯ ಉದ್ದೇಶದಿಂದ ಪಕ್ಷ ರಚನೆಗೊಂಡಿದೆ ಎಂದು ಮಮತಾ ಒತ್ತಿ ಹೇಳಿದ್ದಾರೆ.

ಪಕ್ಷ ಸ್ಥಾಪನೆಯ ವರ್ಷಾಚರಣೆ ಹಿನ್ನೆಲೆಯಲ್ಲಿ ಎಕ್ಸ್‌ (ಟ್ವಿಟರ್‌) ಖಾತೆಯಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಅವರು, 'ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತ ಮತ್ತು ಬೆಂಬಲಿಗರ ತ್ಯಾಗ ಹಾಗೂ ಅರ್ಪಣಾ ಮನೋಭಾವದ ಬಗ್ಗೆ ಗೌರವ ಹೊಂದಿದ್ದೇನೆ. ಟಿಎಂಸಿ ಕುಟುಂಬಕ್ಕೆ ಇಂದು ಎಲ್ಲರ ಪ್ರೀತಿ ಮತ್ತು ವಾತ್ಸಲ್ಯದ ಆಶೀರ್ವಾದ ದೊರೆತಿದೆ' ಎಂದು ಬರೆದುಕೊಂಡಿದ್ದಾರೆ.

ದೇಶದ ಸಾಮಾನ್ಯ ಜನರಿಗಾಗಿ ಹೋರಾಟವನ್ನು ಮುಂದುವರಿಸುವುದಾಗಿ ಪ್ರಮಾಣ ಮಾಡಿರುವ ಮಮತಾ, 'ಪ್ರಜಾಪ್ರಭುತ್ವ ವ್ಯವಸ್ಥೆಯನ್ನೊಳಗೊಂಡ ಈ ಬಹುದೊಡ್ಡ ರಾಷ್ಟ್ರದಲ್ಲಿ ನಮ್ಮ ಹೋರಾಟವನ್ನು ಮುಂದುವರಿಸಲು, ನೀವು ನೀಡುತ್ತಿರುವ ಬೆಂಬಲವೇ ನಮಗೆ ಶಕ್ತಿಯಾಗಿದೆ' ಎಂದು ಕಾರ್ಯಕರ್ತರಿಗೆ ಹೇಳಿದ್ದಾರೆ.

1998ರಲ್ಲಿ ಕಾಂಗ್ರೆಸ್‌ನಿಂದ ಹೊರಬಂದ ಮಮತಾ ಟಿಎಂಸಿ ಸ್ಥಾಪಿಸಿದರು. 2001 ಮತ್ತು 2006ರ ಚುನಾವಣೆಗಳಲ್ಲಿ ವೈಫಲ್ಯ ಅನುಭವಿಸಿದ್ದ ಟಿಎಂಸಿ, ನಂತರ ನಡೆದ ಸತತ ಮೂರು (2011, 2016 ಹಾಗೂ 2021) ಚುನಾವಣೆಗಳಲ್ಲಿ ಗೆದ್ದು ಅಧಿಕಾರಕ್ಕೇರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT