ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪಂಜಾಬ್‌ | ಮಕ್ಕಳ ಆಟದ ರೈಲು ಪಲ್ಟಿ: ಬಾಲಕ ಸಾವು

Published 24 ಜೂನ್ 2024, 15:56 IST
Last Updated 24 ಜೂನ್ 2024, 15:56 IST
ಅಕ್ಷರ ಗಾತ್ರ

ಚಂಡಿಗಢ: ಮಕ್ಕಳ ಆಟದ ರೈಲಿನ ಬೋಗಿಯೊಂದು ಮಗುಚಿ ಬಿದ್ದ ಪರಿಣಾಮ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ಪಂಜಾಬ್‌ನ ಮಾಲ್‌ವೊಂದರಲ್ಲಿ ನಡೆದಿದೆ. 

ಎಲಾಂಟೆ ಮಾಲ್‌ನಲ್ಲಿ ಶನಿವಾರ ರಾತ್ರಿ ದುರ್ಘಟನೆ ನಡೆದಿದ್ದು, ಪಂಜಾಬ್‌ನ ಬಾಲಚೌರ್‌ ನಿವಾಸಿ ಶಹಬಾಜ್‌(10) ಮೃತ ಬಾಲಕ. ಆತ ತನ್ನ ಕುಟುಂಬದೊಂದಿಗೆ ಮಾಲ್‌ಗೆ ಬಂದಿದ್ದ.

‘ಶಹಬಾಜ್‌ ರೈಲಿನ ಕೊನೆಯ ಬೋಗಿಯಲ್ಲಿ ಕುಳಿತಿದ್ದ. ತಿರುವಿನಲ್ಲಿ ರೈಲಿನ ಬೋಗಿ ಮಗುಚಿ ಬಿದ್ದಿದ್ದು, ಶಹಬಾಜ್‌ ತಲೆಗೆ ಗಂಭೀರ ಗಾಯಗಳಾದ ಪರಿಣಾಮ ಆತ ಮೃತಪಟ್ಟಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಶಹಬಾಜ್‌ನ ಸಂಬಂಧಿಕನೊಬ್ಬನು ಮಕ್ಕಳ ರೈಲಿನಲ್ಲಿ ಕುಳಿತಿದ್ದು, ಅದೃಷ್ಟವಶಾತ್‌ ಆತ ಅಪಾಯದಿಂದ ಪಾರಾಗಿದ್ದಾನೆ.

ರೈಲಿನ ಚಾಲಕ ಮತ್ತು ಮಾಲ್‌ನ ನಿರ್ವಾಹಕರ ವಿರುದ್ಧ ಪ್ರಕರಣ ದಾಖಲಾಗಿದ್ದು, ರೈಲನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT