ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರುದ್ಯೋಗ ದೇಶದ ಜಲ್ವಂತ ಸಮಸ್ಯೆ: ಮಲ್ಲಿಕಾರ್ಜುನ ಖರ್ಗೆ

Published 24 ಡಿಸೆಂಬರ್ 2023, 9:19 IST
Last Updated 24 ಡಿಸೆಂಬರ್ 2023, 9:19 IST
ಅಕ್ಷರ ಗಾತ್ರ

ನವದೆಹಲಿ: ‘ನಿರುದ್ಯೋಗವು ದೇಶದ ಜಲ್ವಂತ ಸಮಸ್ಯೆಯಾಗಿದೆ’ ಎಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಈ ಬಗ್ಗೆ ಎಕ್ಸ್‌ನಲ್ಲಿ ಬರೆದುಕೊಂಡಿರುವ ಅವರು, ‘ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇವೆ ಎಂಬ ಭರವಸೆ ಎಲ್ಲಿ ಹೋಯಿತು? ನೇಮಕಾತಿ ಪರೀಕ್ಷೆ ಮತ್ತು ಉದ್ಯೋಗ ನೀಡುವ ಪ್ರಕ್ರಿಯೆಗಳಲ್ಲಿ ವಿಳಂಬವಾಗುತ್ತಿರುವುದೇಕೆ? ಎಂದು ದೇಶದ ಯುವಜನರು ಕೇಳುತ್ತಿದ್ದಾರೆ’ ಎಂದರು.

ಪಿಎಲ್‌ಎಫ್‌ಎಸ್‌ ಸಮೀಕ್ಷೆಯನ್ನು ಉಲ್ಲೇಖಸಿದ ಖರ್ಗೆ, ನಿರುದ್ಯೋಗವು ದೇಶದ ಜಲ್ವಂತ ಸಮಸ್ಯೆಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ‘ಜುಲೈ 2022ರಿಂದ ಜೂನ್‌ 2023ರವರೆಗೆ ಗ್ರಾಮೀಣ ನಿರುದ್ಯೋಗ ಪ್ರಮಾಣ(15-19 ವರ್ಷ ವಯಸ್ಸಿನ) ಶೇ. 8.3ರಷ್ಟಿದ್ದರೆ, ಇದೇ ಅವಧಿಯಲ್ಲಿ ನಗರ ನಿರುದ್ಯೋಗ ಪ್ರಮಾಣ ಶೇ.13.8ರಷ್ಟಿತ್ತು ಎಂದು ಸಮೀಕ್ಷೆ ತಿಳಿಸಿದೆ’ ಎಂದರು.

‘ಯಾಕಾಗಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ನಾಶಪಡಿಸಲಾಯಿತು? ಯಾಕಾಗಿ ಯುವಕರ ಉದ್ಯೋಗಗಳನ್ನು ಕಿತ್ತುಕೊಂಡು ಅವರ ಭವಿಷ್ಯವನ್ನು ಹಾಳು ಮಾಡಲಾಯಿತು?’ ಎಂದು ಕೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT