ನಾನು ಇಡೀ ಹೈಕೋರ್ಟ್ ಅನ್ನು ದೂಷಿಸುವುದಿಲ್ಲ. ಆದರೆ ಇಬ್ಬರು ನ್ಯಾಯಮೂರ್ತಿಗಳು ನಮ್ಮ ನಂಬಿಕೆಯನ್ನು ನುಚ್ಚು ನೂರು ಮಾಡಿದ್ದಾರೆ. ಹಿಂದಿನ ನ್ಯಾಯಮೂರ್ತಿ ಅವರು ನಮಗೆ ನ್ಯಾಯ ಒದಗಿಸಿದ್ದರು. ಆದರೆ ಈಗ ಅಪರಾಧಿಗೆ ಜಾಮೀನು ಸಿಕ್ಕಿದೆ
ಅಪರಾಧಿಯ ಶಿಕ್ಷೆ ಅಮಾನತುಗೊಂಡಿರುವುದಕ್ಕೆ ನಾನು ಹೆದರುವುದಿಲ್ಲ. ದೇಶದ ಮಹಿಳೆಯರಿಗಾಗುತ್ತಿರುವ ಅನ್ಯಾಯವನ್ನು ಸಾರ್ವಜನಿಕವಾಗಿ ಪ್ರಶ್ನಿಸಲು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದೇನೆ. ನನ್ನನ್ನು ಜೈಲಿಗೆ ಹಾಕಿದರೂ ನಾನು ಹೆದರುವುದಿಲ್ಲ