ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಥುರಾ: ದೇವಾಲಯದ ಮೆಟ್ಟಿಲಿನ ಬಳಿ ಮಾಂಸಾಹಾರ ಬೇಯಿಸಿದ ವ್ಯಕ್ತಿ ಬಂಧನ

Published 21 ಜೂನ್ 2024, 9:18 IST
Last Updated 21 ಜೂನ್ 2024, 9:18 IST
ಅಕ್ಷರ ಗಾತ್ರ

ಮಥುರಾ: ಮಥುರಾದ ಬರ್ಸಾನಾ ಪ್ರದೇಶದಲ್ಲಿರುವ ಲಾಡ್ಲಿ ದೇವಾಲಯದ (ರಾಧಾ ರಾಣಿ ದೇವಾಲಯ) ಮೆಟ್ಟಿಲುಗಳ ಬಳಿ ಮಾಂಸಾಹಾರ ಬೇಯಿಸುತ್ತಿದ್ದ ವ್ಯಕ್ತಿಯನ್ನು ಭಕ್ತರು ತಳಿಸಿದ್ದು, ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.

‘ಸಂಜಯ್‌ ಎನ್ನುವಾತ ಬಂಧಿತ ವ್ಯಕ್ತಿ. ಈತ ರಾಜಸ್ಥಾನ ಮೂಲದವನು. ಕಳೆದ ಕೆಲವು ವರ್ಷಗಳಿಂದ ದೇವಾಲಯದ ಆವರಣದಲ್ಲಿ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದ. ಪೂಜಾಸ್ಥಳ ಅಪವಿತ್ರಗೊಳಿಸಿದ ಆರೋಪದ ಮೇಲೆ ಆತನನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಗುರುವಾರ ಸಂಜೆ ದೇಗುಲದ ಮೆಟ್ಟಿಲುಗಳ ಬಳಿ ಮಾಂಸಾಹಾರ ಬೇಯಿಸುತ್ತಿದ್ದ ಎಂದು ಸಂಜಯ್‌ಗೆ ಸ್ಥಳದಲ್ಲಿದ್ದ ಕೆಲವು ಭಕ್ತರು ಥಳಿಸಿದ್ದಾರೆ. ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದು, ಆತನನ್ನು ಬಂಧಿಸಲಾಗಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT