ಘಟನೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆಯಾಗಿದ್ದ ಫೋಟೊದಿಂದ ಪೊಲೀಸರು ಮಾಹಿತಿ ಪಡೆದುಕೊಂಡರು. ಮೊಹಮದ್‌ಪುರ್ ಪ್ರದೇಶದ ಮನೆಯೊಂದರ ಮೇಲ್ಛಾವಣಿಯಲ್ಲಿ ಧ್ವಜ ಪತ್ತೆಯಾಗಿದೆ ಎಂದು ಅಧಿಕಾರಿ ಸಂಜಯ್ ತೋಮರ್ ಹೇಳಿದ್ದಾರೆ.
ಅರೇಬಿಕ್ ಬರಹವನ್ನು ಬಳಸಿ ಧ್ವಜವನ್ನು ವಿರೂಪಗೊಳಿಸುವ ಮೂಲಕ ರಾಷ್ಟ್ರಧ್ವಜಕ್ಕೆ ಅಗೌರವ ತೋರಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಹಮ್ಮದ್ ಖಾದಿರ್ ಮತ್ತು ಅವರ ಮಗ ಮೊಹಮ್ಮದ್ ಫಾಜಿಲ್‌ನನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.