ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪತ್ರಕರ್ತ ಮುರಳೀಧರ ರೆಡ್ಡಿ ನಿಧನ

Published 23 ಜೂನ್ 2024, 15:43 IST
Last Updated 23 ಜೂನ್ 2024, 15:43 IST
ಅಕ್ಷರ ಗಾತ್ರ

ನವದೆಹಲಿ: ‘ದಿ ಹಿಂದೂ’ ಪತ್ರಿಕೆಯಲ್ಲಿ ದೀರ್ಘಾವಧಿ ಕೆಲಸ ಮಾಡಿದ್ದ ಪತ್ರಕರ್ತ ಬಿ. ಮುರಳೀಧರ ರೆಡ್ಡಿ (64) ನಿಧನರಾದರು. 

‘ದಿ ಹಿಂದೂ’ ಪತ್ರಿಕೆಗೆ ಪಾಕಿಸ್ತಾನ ಹಾಗೂ ಶ್ರೀಲಂಕಾ ಪ್ರತಿನಿಧಿಯಾಗಿ ವರದಿಗಳನ್ನು ಮಾಡಿದ್ದ ಅವರು, ರಾಮ್‌ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ಶನಿವಾರ ರಾತ್ರಿ ಅನಾರೋಗ್ಯದಿಂದಾಗಿ ಮೃತಪಟ್ಟರು. ಪಿಟಿಐ ಸುದ್ದಿಸಂಸ್ಥೆಯ ಮಾಜಿ ಪತ್ರಕರ್ತೆ ಅಪರ್ಣಾ ಶ್ರೀವಾಸ್ತವ ಅವರು ಮುರಳೀಧರ ರೆಡ್ಡಿ ಅವರ ಪತ್ನಿ. ಮೃತರಿಗೆ ಒಬ್ಬ ಪುತ್ರ ಇದ್ದಾರೆ. 

ಮೋಟರ್ ನ್ಯೂರಾನ್ ಕಾಯಿಲೆಯಿಂದ (ಎಂಎನ್‌ಡಿ) ಬಳಲುತ್ತಿದ್ದ ಮುರಳೀಧರ ರೆಡ್ಡಿ ಅವರು ಒಂದು ತಿಂಗಳಿನಿಂದ ಕೃತಕ ಉಸಿರಾಟದ ವ್ಯವಸ್ಥೆಯಿಂದಲೇ ಬದುಕಿದ್ದರು. ಎರಡು ವಾರಗಳ ಹಿಂದೆ ಹೃದಯಾಘಾತದ ನಂತರ ಅವರಿಗೆ ಪ್ರಜ್ಞೆ ತಪ್ಪಿತ್ತು. 

ರಾಜಕೀಯ ವಿದ್ಯಮಾನಗಳೂ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಅವರು ವರದಿಗಳನ್ನು ಬರೆದಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT