ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಡಿಯೊ ವಿವರ ಪ್ರದರ್ಶನ ಕಡ್ಡಾಯ: ಯೂಟ್ಯೂಬ್‌ ಹೊಸ ಮಾನದಂಡ

Published 21 ಮಾರ್ಚ್ 2024, 23:07 IST
Last Updated 21 ಮಾರ್ಚ್ 2024, 23:07 IST
ಅಕ್ಷರ ಗಾತ್ರ

ನವದೆಹಲಿ: ನೈಜ ವಿಡಿಯೊಗಳೇ ಅಥವಾ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿ ಸೃಷ್ಟಿಸಲಾಗಿದೆಯೇ ಎಂಬ ಬಗ್ಗೆ ವಿಡಿಯೊ ತಯಾರಕರು ಕಡ್ಡಾಯವಾಗಿ ಅವುಗಳ ಮೇಲೆ ಲೇಬಲ್‌ ಪ್ರದರ್ಶಿಸಬೇಕಿದೆ ಎಂದು ಗೂಗಲ್‌ ಒಡೆತನದ ಯೂಟ್ಯೂಬ್‌ ಸೂಚಿಸಿದೆ.

‌ಯೂಟ್ಯೂಬ್‌ಗೆ ಅಪ್‌ಲೋಡ್‌ ಮಾಡುವ ವಿಡಿಯೊಗಳ ಪಾರದರ್ಶಕತೆ ಬಗ್ಗೆ ತಿಳಿಯಲು ಬಳಕೆದಾರರು ಇಚ್ಛಿಸುತ್ತಾರೆ. ಹಾಗಾಗಿ, ಅವುಗಳ ನೈಜತೆ ಕುರಿತು ತಿಳಿಸುವುದೇ ಈ ಹೊಸ ಮಾನದಂಡದ ಮೂಲ ಉದ್ದೇಶವಾಗಿದೆ ಎಂದು ಹೇಳಿದೆ.

ಪ್ರಸ್ತುತ ಯೂಟ್ಯೂಬ್‌ನ ಕ್ರಿಯೇಟರ್‌ ಸ್ಟುಡಿಯೊದಲ್ಲಿ ಹೊಸ ಟೂಲ್‌ ಅನ್ನು ಪರಿಚಯಿಸಲಾಗಿದೆ. ಹಾಗಾಗಿ, ವಿಡಿಯೊ ತಯಾರಕರು ಮತ್ತು ವೀಕ್ಷಕರ ನಡುವಿನ ನಂಬಿಕೆಯನ್ನು ಬಲಗೊಳಿಸುವ ನಿಟ್ಟಿನಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವುದು ಅನಿವಾರ್ಯವಾಗಿದೆ ಎಂದು ಹೇಳಿದೆ. ವಿಡಿಯೊಗಳಲ್ಲಿ ಇರುವ ವಿಷಯದ ನೈಜತೆ, ನೈಜ ವ್ಯಕ್ತಿ, ಸ್ಥಳ, ದೃಶ್ಯ ಅಥವಾ ಕಾರ್ಯಕ್ರಮ ಗಳ ಬಗೆಗಿನ ಮಾಹಿತಿಯನ್ನು ಅವುಗಳ ತಯಾರಕರು, ವೀಕ್ಷಕ ರಿಗೆ ಬಹಿರಂಗಪಡಿಸಬೇಕಿದೆ. ಅನಿಮೇಟೆಡ್‌, ಎ.ಐ ತಂತ್ರಜ್ಞಾನ ಬಳಸಿ ವಿಡಿಯೊ ಸೃಷ್ಟಿಸುವವರು ನಮಗೆ ಅಗತ್ಯವಿಲ್ಲ ಎಂದಿದೆ.

ವಿಡಿಯೊಗಳ ಮೇಲೆ ಲೇಬಲ್‌ ಪ್ರದರ್ಶಿಸಿದರೂ ಅದರ ನೈಜತೆ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸುವುದು ಕಡ್ಡಾಯ. ಇಲ್ಲವಾದರೆ ಅಂತಹ ವಿಡಿಯೊಗಳು ಜನರನ್ನು ದಿಕ್ಕುತಪ್ಪಿಸುವ ಸಾಧ್ಯತೆ ಇರುತ್ತದೆ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT