ರೂರ್ಕೆಲಾ: ಎಫ್ಐಎಚ್ ಪ್ರೊ ಲೀಗ್ನ ರೂರ್ಕೆಲಾ ಲೆಗ್ನಲ್ಲಿ ಭಾರತ ಪುರುಷರ ಹಾಕಿ ತಂಡದ ನಿರಾಶಾದಾಯಕ ಪ್ರದರ್ಶನ ಮುಂದುವರಿದಿದೆ. ಶನಿವಾರ ನಡೆದ ಪಂದ್ಯದಲ್ಲಿ ಆತಿಥೇಯ ತಂಡವು 2-4 ಅಂತರದಿಂದ ಬೆಲ್ಜಿಯಂ ವಿರುದ್ಧ ಸೋಲು ಅನುಭವಿಸಿದೆ.

ಇಲ್ಲಿನ ಬಿರ್ಸಾ ಮುಂಡಾ ಹಾಕಿ ಕ್ರೀಡಾಂಗಣದಲ್ಲಿ ಹರ್ಮನ್ಪ್ರೀತ್ ಸಿಂಗ್ ಬಳಗಕ್ಕೆ ಇದು ಹ್ಯಾಟ್ರಿಕ್ ಸೋಲು. ಇದಕ್ಕೂ ಮುನ್ನ ಬೆಲ್ಜಿಯಂ ವಿರುದ್ಧ 1–3ರಿಂದ; ಅರ್ಜೆಂಟೀನಾ ವಿರುದ್ಧ 0–8ರಿಂದ ಮುಗ್ಗರಿಸಿತ್ತು.

ಭಾರತ ತಂಡದ ಪರ ಆದಿತ್ಯ ಲಾಲೇಜ್ (24ನೇ ನಿಮಿಷ) ಮತ್ತು ನಾಯಕ ಹರ್ಮನ್ಪ್ರೀತ್ ಸಿಂಗ್ (37ನೇ ನಿ) ತಲಾ ಒಂದು ಗೋಲು ಗಳಿಸಿದರು. ಬೆಲ್ಜಿಯಂ ಪರ ಅಲೆಕ್ಸಾಂಡರ್ ಹೆಂಡ್ರಿಕ್ಸ್ (14ನೇ ಮತ್ತು 17ನೇ) ಎರಡು ಗೋಲು ಗಳಿಸಿ ಮಿಂಚಿದರು. ಹ್ಯೂಗೋ ಲಾಬೌಚೆರ್ (11ನೇ) ಮತ್ತು ಆರ್ಥರ್ ಡಿ ಸ್ಲೋವರ್ (15ನೇ) ತಲಾ ಒಂದು ಬಾರಿ ಚೆಂಡನ್ನು ಗುರಿ ಸೇರಿಸಿದರು.

ಭಾರತ ತಂಡವು ಭಾನುವಾರ ರೂರ್ಕೆಲಾ ಲೆಗ್ನ ಕೊನೆಯ ಪಂದ್ಯವನ್ನು ಅರ್ಜೆಂಟೀನಾ ವಿರುದ್ಧ ಆಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.