ಮಮತಾ ಬ್ಯಾನರ್ಜಿ ಅವರು ಟೀ ಎಸ್ಟೇಟ್‌ನಲ್ಲಿ ಕಾರ್ಮಿಕರಿಗೆ ಚಹಾ ಎಲೆ ಬಿಡಿಸುವ ಕೆಲಸದಲ್ಲಿ ನೆರವಾದರು. ಈ ವೇಳೆ ಕಾರ್ಮಿಕರ ಸಂಕಷ್ಟಗಳನ್ನು ಆಲಿಸಿದರು. ಶಾಲಾ ಮಕ್ಕಳೊಂದಿಗೆ ಮಾತನಾಡಿದ ಮಮತಾ, ‘ಮಕ್ಕಳ ಮುಗ್ಧತೆ ಹಾಗೂ ಅವರ ಉತ್ಸಾಹ, ಉತ್ತಮ ಭವಿಷ್ಯ ರೂಪಿಸುವತ್ತ ನಮ್ಮನ್ನು ಉತ್ತೇಜಿಸುತ್ತದೆ‘ ಎಂದು ಹೇಳಿದ್ದಾರೆ.