ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಲಕರೇ... ನೀವು ನೀರಜ್‌ ಚೋಪ್ರಾ ಅವರ ಜಾವೆಲಿನ್‌ ಅಲ್ಲ: ದೆಹಲಿ ಪೊಲೀಸರ ಸಂದೇಶ

Published 29 ಆಗಸ್ಟ್ 2023, 3:05 IST
Last Updated 29 ಆಗಸ್ಟ್ 2023, 3:05 IST
ಅಕ್ಷರ ಗಾತ್ರ

ನವದೆಹಲಿ: ಸಂಚಾರ ನಿಯಮ ಪಾಲನೆ ಕುರಿತು ಜನರಿಗೆ ಹಾಸ್ಯದ ರೀತಿಯಲ್ಲಿ ಸಂದೇಶ ರವಾನಿಸುವ ದೆಹಲಿ ಪೊಲೀಸರು ಇದೀಗ ಜಾವೆಲಿನ್‌ನಲ್ಲಿ ವಿಶ್ವ ಚಾಂಪಿಯನ್‌ಷಿಪ್‌ ಗೆದ್ದಿರುವ ನೀರಜ್ ಚೋಪ್ರಾ ಅವರನ್ನು ಸಾದೃಶವಾಗಿ ಬಳಸಿಕೊಂಡಿದ್ದಾರೆ.

ಈ ಬಗ್ಗೆ ಸಾಮಾಜಿಕ ಮಾಧ್ಯಮ ‘ಎಕ್ಸ್‌’ನಲ್ಲಿ ಬರೆದುಕೊಂಡಿರುವ ದೆಹಲಿ ಪೊಲೀಸರು, ‘ನೀರಜ್‌ ಚೋಪ್ರಾ ಅವರ ಜಾವೆಲಿನ್‌ ವೇಗವಾಗಿ ಹೋಗಿ ಬಿಳಿ ರೇಖೆಯನ್ನು ದಾಟುವ ಹಾಗೆ ನೀವು ವೇಗವಾಗಿ ತೆರಳಿ ಸಂಚಾರ ನಿಯಮವನ್ನು ಮುರಿಯಬೇಡಿ’ ಎಂದು ಚಾಲಕರಿಗೆ ಸಂದೇಶ ನೀಡಿದ್ದಾರೆ.

’ಚಾಲಕರೇ...... ನೀವು ನೀರಜ್ ಅವರ ಜಾವೆಲಿನ್ ಅಲ್ಲ. ಬಿಳಿ ರೇಖೆಗಳನ್ನು ದಾಟುವುದರಿಂದ ನಿಮಗೆ ಅಂಕಗಳು ಅಥವಾ ಪದಕಗಳು ಸಿಗುವುದಿಲ್ಲ. ನೀರಜ್‌ ಚೋಪ್ರಾ ಅವರ ಹಾಗೆ ಹೃದಯವನ್ನು ಗೆಲ್ಲಿ, ಚಲನ್‌ಗಳನಲ್ಲ’ ಎಂದು ಪೋಸ್ಟ್‌ ಮಾಡಿದ್ದಾರೆ.

ಓದಿ: ರಾಷ್ಟ್ರಧ್ವಜದ ಮೇಲೆ ಆಟೋಗ್ರಾಫ್‌ ಬರೆಯಲು ನಿರಾಕರಿಸಿದ ನೀರಜ್‌ ಚೋಪ್ರಾ

ದೆಹಲಿ ಪೊಲೀಸರ ಪೋಸ್ಟ್‌ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಂಚಾರ ನಿಯಮಗಳನ್ನು ಪಾಲಿಸುವ ಬಗ್ಗೆ ಇನ್ನಷ್ಟು ಕಠಿಣ ಕ್ರಮಗಳು ಅಗತ್ಯಯಿದೆ ಎಂದು ತಿಳಿಸಿದ್ದಾರೆ.

ಒಲಿಂಪಿಕ್ಸ್‌, ಏಷ್ಯನ್‌ ಗೇಮ್ಸ್‌ ಮತ್ತು ಕಾಮನ್‌ವೆಲ್ತ್‌ ಕೂಟದಲ್ಲಿ ಚಿನ್ನ ಜಯಿಸಿದ್ದ ನೀರಜ್‌ ಚೋಪ್ರಾ ಡೈಮಂಡ್‌ ಲೀಗ್‌ನಲ್ಲೂ ಚಾಂಪಿಯನ್‌ ಆಗಿದ್ದರು. ಅವರಿಗೆ ಏಕೈಕ ಕೊರತೆ ಎನಿಸಿದ್ದ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ ಪಟ್ಟವೂ ಈಗ ದೊರೆತಿದೆ. ಆ ಮೂಲಕ ನೀರಜ್ ಜಾವೆಲಿನ್‌ಗೆ ಕಿಂಗ್‌ ಎನಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT