ಹೈದರಾಬಾದ್ (ಪಿಟಿಐ): ಆಂಧ್ರಪ್ರದೇಶ ಇಬ್ಭಾಗದ ನಂತರ ನಡೆದ ಮೊದಲ ಚುನಾವಣೆಯಲ್ಲಿ ವಿಜಯ ಸಾಧಿಸಿರುವ ತೆಲುಗುದೇಶಂ ಪಕ್ಷ (ಟಿಡಿಪಿ) ಇಂದಿನಿಂದ ಎರಡು ದಿನಗಳ ಕಾಲ ‘ಮಹಾನಾಡು’ ವಾರ್ಷಿಕ ಸಮಾವೇಶ ಆಯೋಜಿಸಿದೆ. ಕಳೆದ ಹತ್ತು ವರ್ಷಗಳಿಂದ ವಿರೋಧ ಪಕ್ಷದ ಸ್ಥಾನದಲ್ಲಿದ್ದ ಟಿಡಿಪಿಗೆ ಈಗ ಚುನಾವಣಾ ಗೆಲುವಿನಿಂದ ಹೊಸ ಹುರುಪು ಬಂದಿದೆ.