ಲಖನೌ: ಉತ್ತರ ಪ್ರದೇಶದಲ್ಲಿ ಮೂರನೇ ಹಂತದ ವಿಧಾನಸಭಾ ಚುನಾವಣೆಯ ಮತದಾನ ಭಾನುವಾರ ಶಾಂತಿಯುತವಾಗಿ ನಡೆಯುತ್ತಿದ್ದು ಮಧ್ಯಾಹ್ನದ ವೇಳೆಗೆ ಶೇ.45 ರಷ್ಟು ಮತದಾನವಾಗಿರುವ ಬಗ್ಗೆ ವರದಿಯಾಗಿದೆ.
12 ಜಿಲ್ಲೆಗಳಲ್ಲಿ ಹರಡಿರುವ 69 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ಸಣ್ಣ ಪುಟ್ಟ ಗಲಾಟೆಗಳನ್ನು ಹೊರತುಪಡಿಸಿದರೆ ಮತದಾನ ಬಹುತೇಕ ಶಾಂತಿಯುತವಾಗಿ ನಡೆಯುತ್ತಿದೆ.
ಒಟ್ಟು 25,603 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದ್ದು, 1.1 ಕೋಟಿ ಮಹಿಳೆಯರು, 1,026 ತೃತೀಯ ಲಿಂಗಿಗಳು ಸೇರಿದಂತೆ 2.41 ಕೋಟಿ ಮತದಾರರು ಇಲ್ಲಿದ್ದಾರೆ.