ದಂಡ ಕಟ್ಟುವುದೇ ಸುಲಭ
ಪರ್ವತಾರೋಹಣ ಆರಂಭಕ್ಕೂ ಮುನ್ನ ನೇಪಾಳ ಮತ್ತು ಟಿಬೆಟ್ಗಳಲ್ಲಿ ಪ್ರತೀ ತಂಡ 4,000 ಡಾಲರ್ (ಸುಮಾರು ₹ 2.7 ಲಕ್ಷ) ಭದ್ರತಾ ಠೇವಣಿ ಇರಿಸಬೇಕು. ತಂಡದ ಪ್ರತಿಯೊಬ್ಬ ಪರ್ವತಾರೋಹಿಯೂ ವಾಪಸ್ ಬರುವಾಗ ತನ್ನೊಂದಿಗೆ 8 ಕೆ.ಜಿ.ಯಷ್ಟು ಕಸ ವಾಪಸ್ ತರಬೇಕು. ವಾಪಸ್ ತರದಿದ್ದರೆ ಪ್ರತಿ 1 ಕೆ.ಜಿ. ಕಸಕ್ಕೆ 100 ಡಾಲರ್ (ಸುಮಾರು ₹ 6,800) ಅನ್ನು ಭದ್ರತಾ ಠೇವಣಿಯಲ್ಲಿ ಕಡಿತ ಮಾಡಿಕೊಳ್ಳಲಾಗುತ್ತದೆ. ಇದಕ್ಕೆ ಕಸ ವಾಪಸಾತಿ ಯೋಜನೆ ಎಂದು ಹೆಸರಿಡಲಾಗಿದೆ. ಒಬ್ಬರಿಗೆ ಪರ್ವತಾರೋಹಣದ ಒಟ್ಟು ಖರ್ಚು 20,000 ಡಾಲರ್ನಿಂದ 1ಲಕ್ಷ ಡಾಲರ್ವರೆಗೂ (ಸುಮಾರು ₹ 13.6 ಲಕ್ಷದಿಂದ ₹ 68 ಲಕ್ಷ) ಆಗುತ್ತದೆ. ಅದಕ್ಕೆ ಹೋಲಿಸಿದಲ್ಲಿ ದಂಡದ ಮೊತ್ತ ತೀರಾ ಕಡಿಮೆ. ಹೀಗಾಗಿ ಬಹುತೇಕರು ದಂಡ ಕಟ್ಟುವುದನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಹೀಗಾಗಿಯೇ ಎವರೆಸ್ಟ್ನಲ್ಲಿ ನೂರಾರು ಟನ್ಗಟ್ಟಲೆ ಕಸ ಶೇಖರವಾಗಿದೆ.