ಇಟಾನಗರ (ಪಿಟಿಐ): ಏಕಪತ್ನಿತ್ವ ನೀತಿ ಅನುಸರಿಸಿದವರಿಗೆ ಮಾತ್ರ ಚುನಾವಣೆಗಳಲ್ಲಿ ಟಿಕೆಟ್ ನೀಡಲು ಪಿಪಿಎ (ಪೀಪಲ್ಸ್ ಪಾರ್ಟಿ ಆಫ್ ಅರುಣಾಚಲ) ಪಕ್ಷ ನಿರ್ಧರಿಸಿದೆ.
ಪಂಚಾಯಿತಿ, ಪುರಸಭೆ, ಹಾಗೂ ಸಂಸತ್ ಚುನಾವಣೆಗಳಲ್ಲಿ ಟಿಕೆಟ್ ನೀಡಲು ಏಕಪತ್ನಿತ್ವ/ಏಕ ಪತಿತ್ವ ನೀತಿಯನ್ನು ಅನುಸರಿಸುವುದು ಕಡ್ಡಾಯ ಎಂದು ಪಕ್ಷ ಸಭೆಯಲ್ಲಿ ನಿರ್ಧರಿಸಲಾಗಿದೆ.