ಶ್ರೀನಗರ (ಪಿಟಿಐ): ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಶ್ರೀನಗರ ಜಿಲ್ಲೆಯ ಸೋನವಾರ್ ಕ್ಷೇತ್ರದಲ್ಲಿ ಸೋತು, ಬದ್ಗಮ್ ಜಿಲ್ಲೆಯ ಬೀರ್ವಾಹ್ ಕ್ಷೇತ್ರದಲ್ಲಿ ಗೆದ್ದಿದ್ದಾರೆ.
44 ವರ್ಷದ ಒಮರ್ ಅವರು ಬೀರ್ವಾಹ್ ಕ್ಷೇತ್ರದಲ್ಲಿ ತಮ್ಮ ಪ್ರತಿ ಸ್ಪರ್ಧಿಗಿಂತಲೂ ಸುಮಾರು ಒಂದು ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.